
ಜನವರಿ.30 : ದ.ಕ ಗ್ಯಾರೇಜು ಮಾಲಕರ ಮತ್ತು ನೌಕರರ ಬೃಹತ್ ಸಮಾವೇಶ
ಮೂಡುಬಿದಿರೆ: ದ.ಕ ಗ್ಯಾರೇಜ್ ಮ್ಹಾಲಕರ ಸಂಘ(ರಿ) ಮಂಗಳೂರು ಇದರ ವತಿಯಿಂದ ಪ್ರಪ್ರಥಮ ಬಾರಿಗೆ ಉಭಯ ಜಿಲ್ಲೆಗಳ ಗ್ಯಾರೇಜ್ ಮ್ಹಾಲಕರ ಹಾಗೂ ನೌಕರರ ಬೃಹತ್ ಸಮಾವೇಶವು ಜ.30ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಜರುಗಲಿದೆ ಎಂದು ಮೂಡುಬಿದಿರೆ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ತಿಳಿಸಿದರು.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಭಯಜಿಲ್ಲೆಯಲ್ಲಿ 1200 ಗ್ಯಾರೇಜ್ ಗಳಿದ್ದು ಮೂಡುಬಿದಿರೆಯಲ್ಲಿ 170 ಗ್ಯಾರೇಜ್ ಗಳಿವೆ ಇದರ ಮಾಲಕರು ಮತ್ತು ನೌಕರರೆಲ್ಲರೂ ಗ್ಯಾರೇಜ್ ಮಾಲಕರು ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಅದೇ ದಿನ ಬೆಳಿಗ್ಗೆ ಇಲ್ಲಿನ ಸ್ವರಾಜ್ಯ ಮೈದಾನದ ಬಳಿಯಿಂದ ಮಂಗಳೂರು ವರೆಗೆ ಬೃಹತ್ ಜಾಥಾವು ನಡೆಯಲಿದೆ.
ಅಸಂಘಟಿತ ವರ್ಗದವರ ಕಲ್ಯಾಣ ಯೋಜನೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು, ಉದ್ದಿಮೆ ಪರವಾನಿಗೆ ನೀಡುವ ವಿಚಾರದಲ್ಲಿ ಸರಳತೆ ತಂದು ನಿರುದ್ಯೋಗ ಸಮಸ್ಯೆಯನ್ನು ದೂರೀಕರಿಸಬೇಕು,ಸಣ್ಣ ಕೈಗಾರಿಕೆ ಉದ್ದಿಮೆ ಮಾಡುವವರಿಗೆ ರಿಯಾಯಿತಿ ದರದಲ್ಲಿ ಸಾಲಯೋಜನೆ ಹಾಗೂ ಸಬ್ಸಿಡಿ ನೀಡಬೇಕು,ಗ್ಯಾರೇಜ್ ಮಾಲಕರ ಹಾಗೂ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ ಯೋಜನೆ, ಹೆರಿಗೆ ಸಂದರ್ಭದಲ್ಲಿ ಧನಸಹಾಯ, ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನೌಕರರಿಗೆ ಸಿಗುವ ಸವಲತ್ತುಗಳು ಅಸಂಘಟಿತ ಕಾರ್ಮಿಕ ವರ್ಗಕ್ಕೂ ವಿಸ್ತರಣೆ, ಅಪಘಾತ ಸಂದರ್ಭದಲ್ಲಿ ಪರಿಹಾರ ಮುಂತಾದ ಹಲವು ಬೇಡಿಕೆಗಳ ಕುರಿತು ಸಮಾವೇಶದಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಸಚಿವರ ಮೂಲಕ ನಮ್ಮ ಬೇಡಿಕೆಗಳನ್ನು ಕಳುಹಿಸಲಾಗುವುದೆಂದು ತಿಳಿಸಿದರು.