UDUPI : 5 ತಲೆಮಾರುಗಳನ್ನು ಕಂಡ 102 ವಯಸ್ಸಿನ ಅಜ್ಜಿ ನಿಧನ
Tuesday, January 17, 2023
5 ತಲೆಮಾರುಗಳನ್ನು ಕಂಡ 102 ವಯಸ್ಸಿನ ಉಡುಪಿಯ ಬ್ರಹ್ಮಾವರ ತಾಲೂಕಿನ ನೈಲಾಡಿ ಸಂಪಿಕಟ್ಟೆ ಮನೆಯ ಸಂಕಿಯಜ್ಜಿ ನಿಧನರಾಗಿದ್ದಾರೆ
5 ತಲೆಮಾರುಗಳನ್ನು ಕಂಡ ಸಂಕಿಯಜ್ಜಿಗೆ 8 ಮಂದಿ ಮಕ್ಕಳು, ನಾಲ್ವರು ಅಳಿಯಂದಿರು, ಮೂವರು ಸೊಸೆಯರು, 33 ಮಂದಿ ಮೊಮ್ಮಕ್ಕಳು, 20 ಮರಿಮಕ್ಕಳು, ಓರ್ವ ಮರಿ ಮಗಳ ಮಗಳು ಸಹಿತ ಅಪಾರ ಬಂಧು ಬಾಂದವರಿದ್ದರು. ಅಜ್ಜಿಯ ‘ಹಳಿ ಹಂಬ್ಲ್’ (ಹಳೆಯ ನೆನಪು) ಎಂಬ ಕುಂದಾಪುರ ಕನ್ನಡದ ಸಂದರ್ಶನ ಭೂಮಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಅದರಲ್ಲಿ ಸಂಕಿಯಜ್ಜಿ ತಮ್ಮ ಹಳೆ ಜೀವನ ಶೈಲಿಯ ನೆನಪುಗಳನ್ನು ಯಾವುದೇ ಮರೆವಿಲ್ಲದೆ ತೆರೆದಿಟ್ಟಿದ್ದರು. ಮುಪ್ಪಿನಲ್ಲೂ ಹಳೆಯ ನೆನಪುಗಳನ್ನು ಮೆಲುಕು ಹಾಕಿತ್ತಿದ್ದ ಅಜ್ಜಿಗೆ ಅಪಾರ ನೆನಪಿನ ಶಕ್ತಿ ಇತ್ತು ಅನ್ನೋದನ್ನು ನೆನಪಿಕೊಳ್ಳುತ್ತಾರೆ ಸ್ಥಳೀಯರು.