ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಸ್ಯಾಂಡಲ್ ವುಡ್ ನಟಿಯರಾದ ಪ್ರೇಮಾ ಹಾಗೂ ಅನು ಅಯ್ಯಪ್ಪ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.
ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದ ನಟಿ ಪ್ರೇಮಾ ಹಾಗೂ ಅನು ಅಯ್ಯಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಇಬ್ಬರೂ ನಟಿಯರನ್ನು ಪರ್ಯಾಯ ಕೃಷ್ಣಾಪುರ ಮಠದ ವತಿಯಿಂದ ಗೌರವಿಸಲಾಯಿತು.