-->
UDUPI : ಗಾಂಜಾ, ಡ್ರಗ್ಸ್ ಮಾರಾಟ ; ಇಬ್ಬರು ವಶಕ್ಕೆ

UDUPI : ಗಾಂಜಾ, ಡ್ರಗ್ಸ್ ಮಾರಾಟ ; ಇಬ್ಬರು ವಶಕ್ಕೆ

ಗಾಂಜಾ ಹಾಗೂ ಡ್ರಗ್ಸ್‌ನ್ನು  ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದ ಎಂಬಲ್ಲಿ ನಡೆದಿದೆ. ರಾಘವೇಂದ್ರ ದೇವಾಡಿಗ ಹಾಗೂ ಜಗದೀಶ್‌ ಪೂಜಾರಿ ಬಂಧಿತರು. 
ಬಂಧಿತರು ಮೂಡನಿಡಂಬೂರು ಗ್ರಾಮದ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತುಗಳಾದ ಗಾಂಜಾ ಹಾಗೂ  ಡ್ರಗ್ಸ್‌ನ್ನು  ಮಾರಾಟ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು, 1 ಕೆ.ಜಿ 176 ಗ್ರಾಂ ತೂಕದ ಗಾಂಜಾ , 10 ಗ್ರಾಂ ತೂಕದ Methamphetamine Durg, ನಂಬ್ರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ 1, ಮೊಬೈಲ್‌ಪೋನ್- 2,  ವೇಯಿಂಗ್‌ಮೀಶನ್-1, ಪೌಡರ್‌ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್-17 ಹೀಗೆ, 2,09,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್‌ ಅಪರಾಧ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article