ಸೆಕ್ಸ್ಗಾಗಿ ಪೈಪೋಟಿಗೆ ಬಿದ್ದಿದ್ದ ಆನೆಯನ್ನು ಗುಂಪಿನಿಂದ ಹೊರ ಹಾಕಿದ್ದಕ್ಕೆ ಅದು ಮಾಡಿದ್ದೇನು ಗೊತ್ತಾ..?
Friday, June 25, 2021
ರಾಂಚಿ: ಸೆಕ್ಸ್ಗಾಗಿ ಪೈಪೋಟಿಗೆ ಬಿದ್ದಿದ್ದ ಆನೆಯನ್ನು ಅದರ ಗುಂಪಿನಿಂದ ಹೊರಹಾಕಿದ್ದಕ್ಕೆ ಆಕ್ರೋಶಗೊಂಡ ಆನೆಯು ಕಳೆದ ಎರಡು ತಿಂಗಳಲ್ಲಿ ಸುಮಾರು 16 ಗ್ರಾಮಸ್ಥರನ್ನು ಬಲಿಪಡೆದುಕೊಂಡಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ರಾಕ್ಷಸ ಗಂಡು ಆನೆಯನ್ನು ಗುಂಪಿನಿಂದ ಹೊರ ಹಾಕಿದ್ದಕ್ಕಾಗಿ ಆವೇಶಗೊಂಡ ಆನೆ ಸಿಕ್ಕ ಸಿಕ್ಕವರ ಮೇಲೆ ಮುಗಿಬೀಳುತ್ತಾ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತಿದೆ. ಇಲ್ಲಿಯವರೆಗೂ 16 ಗ್ರಾಮಸ್ಥರನ್ನು ಕೊಂದಿದೆ. ಈ ಆನೆ ಸೆಕ್ಸ್ಗಾಗಿ ಇತರೆ ಆನೆಗಳ ಜತೆ ಪೈಪೋಟಿಗೆ ಬಿದ್ದು, ಜಗಳವಾಡುತ್ತಿತ್ತು.
ಆನೆ ತನ್ನ ಆವೇಶದಿಂದಾಗಿ 16ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಲಿ ಪಡೆದುಕೊಂಡಿದೆ.ಕೆಲವರು ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲೆಂದು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.