ಟ್ರೂ ಕಾಲರ್‌ನಲ್ಲಿ ಹೆಸರು ನೋಡಿಕೊಂಡು ಮಹಿಳೆಯರಿಗೆ ಅಶ್ಲೀಲ ಕರೆ... ಯುವಕ ಅಂದರ್
Friday, June 25, 2021
ಲಖನೌ: ಟ್ರೂ ಕಾಲರ್‌ನಲ್ಲಿ ಹೆಸರು ನೋಡಿಕೊಂಡು ನೂರಾರು ಮಹಿಳೆಯರಿಗೆ ಅಶ್ಲೀಲ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಬಲ್ಲಿಯಾ ಮೂಲದ 35 ವರ್ಷದ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಲಾಗಿದೆ. ಬಿಎ ಪದವೀಧರನಾದ ಈತ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಇವನು ಯಾವುದಾದರೂ 10 ಅಂಕಿಯ ನಂಬರ್ ಅನ್ನು ಟೈಪ್ ಮಾಡುತ್ತಿದ್ದ. ಟ್ರೂಕಾಲರ್‌ನಲ್ಲಿ ಹೆಣ್ಣುಮಕ್ಕಳ ಹೆಸರು ಕಂಡುಬಂದರೆ ಅವರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ ತನ್ನ ನಗ್ನ ದೇಹವನ್ನು ತೋರಿಸಿ, ಅದನ್ನು ರೆಕಾರ್ಡ್ ಮಾಡಿಟ್ಟುಕೊಂಡು ನಂತರ ಮಹಿಳೆಯರಿಗೆ ಕಿರುಕುಳ ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಈ ಸಂಬಂಧ 370 ಮಂದಿ ಮಹಿಳೆಯರು ಉತ್ತರ ಪ್ರದೇಶ ಪೊಲೀಸರ ಮಹಿಳಾ ಪವರ್ ಲೈನ್ 1090ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಈತನನ್ನು ಬಂಧಿಸಿ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ