-->

ಎದೆ ಹಾಲು ಕುಡಿಯುತ್ತಲೆ ಪ್ರಾಣ ಬಿಟ್ಟ ಮಗು...!!

ಎದೆ ಹಾಲು ಕುಡಿಯುತ್ತಲೆ ಪ್ರಾಣ ಬಿಟ್ಟ ಮಗು...!!

ಇಡುಕ್ಕಿ: ತಾಯಿ ಎದೆ ಹಾಲು ಕುಡಿಯುತ್ತಲೇ ಮಗುವೊಂದು ಉಸಿರಾಟ ಸಮಸ್ಯೆಯಿಂದ ಬಳಲಿ ಪ್ರಾಣ ಬಿಟ್ಟಿರುವ  ಘಟನೆ  ನೆಡುಂಕಂಡಂ ಕರುಣಪುರಂನಲ್ಲಿ ನಡೆದಿದೆ. 

ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಗಂಡು ಮಗು ಎದೆಹಾಲು ಕುಡಿಯುತ್ತಲೇ ಅದು ಮೂರ್ಛೆ ಹೋಗಿದೆ. ಇದರಿಂದ ಗಾಬರಿಗೊಂಡ ದಂಪತಿ ಚೆಟ್ಟುಕುಜಿಯ ಖಾಸಗಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಕಂಪಮ್ಮೇಟ್ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99