ಮಟನ್ ಊಟ ಹಾಕಿಸಿಲ್ಲವೆಂದು ವಧುವಿನ ಬದಲು ಬೇರೊಬ್ಬಳಿಗೆ ತಾಳಿಕಟ್ಟಿದ ವರ...
Friday, June 25, 2021
ಜಬ್ಪುರ್ (ಒಡಿಶಾ): ಮದುವೆಯಲ್ಲಿ ಮಟನ್ ಊಟ ಇಲ್ಲ ಎಂದು ವರ ಮದುವೆ ಕ್ಯಾನ್ಸಲ್ ಮಾಡಿ ಮದುಮಗಳ ಬದಲು ಬೇರೊಬ್ಬರಿಗೆ ತಾಳಿಕಟ್ಟಿರುವ ಘಟನೆ ಮನತಿರಾ ಎಂಬ ಗ್ರಾಮದಲ್ಲಿ ನಡೆದಿದೆ.
ವರ ಊಟದಲ್ಲಿ ಮಟನ್ ಇಲ್ಲದ್ದನ್ನು ಕಂಡು ಅಲ್ಲಿಯೇ ಮದುವೆ ಕ್ಯಾನ್ಸಲ್ ಮಾಡಿ ವಧುವಿನ ಮನೆಯವರು ಎಷ್ಟೇ ವಿನಂತಿ ಮಾಡಿಕೊಂಡರು ಈ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ರಮಾಕಾಂತ್ ಪತ್ರಾ ಮದುವೆ ಮುರಿದ ವರ. ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಟವಿತ್ತು. ಈ ಕೂಟದಲ್ಲಿ ಮಟನ್ ಊಟ ರೆಡಿ ಮಾಡುವಂತೆ ವರನ ಕಡೆಯವರು ವಧುವಿನ ಕುಟುಂಬಸ್ಥರಿಗೆ ಹೇಳಿದ್ದರು. ಆದರೆ ಕೆಲವು ಕಾರಣಗಳಿಂದ ವಧುವಿನ ಮನೆಯವರಿಗೆ ಅದು ಸಾಧ್ಯವಾಗಿರಲಿಲ್ಲ.ಅದಕ್ಕಾಗಿ ವರ ವಧುವಿನ ಕಡೆಯವರು ಎಷ್ಟೇ ಮನವಿ ಮಾಡಿಕೊಂಡರು ಈ ಮದುವೆ ಸಾಧ್ಯವಿಲ ಎಂದು ಹೇಳಿದ್ದಾನೆ.
ನಂತರ ಅದೇ ಗ್ರಾಮದ ಸಂಬಂಧಿಕರ ಮನೆಯಲ್ಲಿ ಅಥವಾ ಉಳಿದಿದ್ದು, ಅವರ ಅಭಿಪ್ರಾಯದಂತೆ ಅದೇ ಗ್ರಾಮದ ಬೇರೊಬ್ಬಳು ಹುಡುಗಿಯನ್ನು ಆತ ಮದುವೆಯಾಗಿದ್ದಾನೆ. ಆದರೆ ಈ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.