
ಮಂಗಳೂರಿನಲ್ಲಿ ಜೂನ್ 26,27 ವೀಕೆಂಡ್ ಕರ್ಪ್ಯೂ- ಅನಗತ್ಯ ಹೊರಗೆ ಬಂದರೆ ವಾಹನ ಸೀಜ್
ಮಂಗಳೂರು; ಮಂಗಳೂರಿನಲ್ಲಿ ಜೂನ್ 26 ಮತ್ತು 27ರಂದು ವೀಕೆಂಡ್ ಕರ್ಫ್ಯೂ ಇರಲಿದ್ದು ಈ ಸಂದರ್ಭದಲ್ಲಿ ವಾಹನದಲ್ಲಿ ಅನಗತ್ಯ ತಿರುಗಾಡಿದರೆ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಎಚ್ಚರಿಸಿದ್ದಾರೆ.
ಮೆಡಿಕಲ್ ಹಾಲು ಮತ್ತು ಸರಕಾರಿ ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿದೆ. ಉಳಿದವರು ವಾಹನದಲ್ಲಿ ತಿರುಗಾಡಿದರೆ ಮುಟ್ಟುಗೋಲು ಹಾಕಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಆನ್ಲೈನ್ ಡೆಲಿವರಿ ಸಿಬ್ಬಂದಿಗಳಿಂದ ಮಾತ್ರ ಆಹಾರ ತಿನಸುಗಳನ್ನು ತರಿಸಲು ಅವಕಾಶವಿದೆ. ಉಳಿದಂತೆ ಅಂಗಡಿ, ಹೋಟೆಲ್ ಗೆ ಹೋಗಿ ಜನರು ಪಾರ್ಸೆಲ್ ನಂತರ ಅವಕಾಶವಿಲ್ಲ ಎಂದು ತಿಳಿಸಿದರು