ಸುರತ್ಕಲ್ : ಪ್ರಜಾಧ್ವನಿ ಯಾತ್ರೆಗೆ ಭವ್ಯವಾದ ಸ್ವಾಗತ
Monday, January 23, 2023
ಸುರತ್ಕಲ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ತೆರಳುವ ದಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಷ್ಟ್ರೀಯ ಹೆದ್ದಾರಿ ಸುರತ್ಕಲ್ ಎನ್ ಐಟಿಕೆ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಮುಲ್ಕಿ ಭವ್ಯವಾಗಿ ಸ್ವಾಗತ ಕೋರಿದರು.
ಉಡುಪಿಯಿಂದ ಸಾಗಿಬಂದ ಪ್ರಜಾಧ್ವನಿ ಯಾತ್ರೆಯನ್ನು ಎನ್ ಐಟಿಕೆ ಬಳಿ ಕಾಂಗ್ರೆಸ್ ಮುಖಂಡರು, ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸಿದ್ದ ಎರಡು ಜೆಸಿಬಿಯಿಂದ ಯಾತ್ರೆಯ ವಾಹನದ ಮೇಲೆ ಹೂವಿನ ಮಳೆ ಸುರಿಸಲಾಯಿತು. ಇನಾಯತ್ ಅಲಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿ ಜಯಕಾರ ಹಾಕಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರತ್ತ ಕೈಬೀಸಿ ಮುಂದಕ್ಕೆ ಚಲಿಸಿದರು. ನೂರಾರು ಬೈಕ್, ಕಾರ್ ಗಳಲ್ಲಿ ಇನಾಯತ್ ಅಲಿ ಬೆಂಬಲಿಗರು ಪಕ್ಷದ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಎಸಿಪಿ ಮಹೇಶ್ ಪ್ರಸಾದ್, ಸುರತ್ಕಲ್ ಎಸ್ ಐ ಪುನೀತ್ ಗಾಂಡ್ಕರ್ ಬಂದೋಬಸ್ತ್ ಏರ್ಪಡಿಸಿದ್ದರು.