NIA ಬಂಧಿತ ರೆಶಾನ್ ತಂದೆಗೆ ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? : ಶಾಸಕ ರಘುಪತಿ ಭಟ್
Friday, January 6, 2023
ಮಂಗಳೂರಿನಲ್ಲಿ NIA ತಂಡದಿಂದ ಬಂಧನಕ್ಕೆ ಒಳಗಾಗ ರೆಶಾನ್ ತಂದೆ ಉಡುಪಿಯ ಬ್ರಹ್ಮಾವರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಹೀಗಾಗಿ ಬಂಧಿತ ರೆಶಾನ್ ತಂದೆಗೆ ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಅಂತ ಶಾಸಕ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ..
ಉಡುಪಿಯಲ್ಲಿ ಈ ವಿಚಾರವಾಗಿ ಮಾತಾನಾಡಿದ ಉಡುಪಿ ಶಾಸಕ ರಘುಪತಿ ಭಟ್, ಬ್ಲಾಕ್ ಕಾಂಗ್ರೆಸ್ ನಲ್ಲಿ ತಾಜುದ್ದೀನ್ ಸಕ್ರಿಯ ಕಾರ್ಯಕರ್ತ.ಸಿದ್ದರಾಮಯ್ಯ, ಡಿಕೆಶಿ- ಯು ಟಿ ಖಾದರ್ ಪರಮಾಪ್ತ.ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು.ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡ್ತಾತ್ತಾರಾ? ಅಂತ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ.ರೆಶಾನ್ ಕುಟುಂಬದ ಬಗ್ಗೆ ಕೂಡಾ ತನಿಖೆ ಮಾಡಬೇಕು.ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ .ಆಕೆಯ ಮೇಲೆ ಲಿಖಿತ ದೂರನ್ನು ಶಿಕ್ಷಣ ಸಚಿವ ನಾಗೇಶ್ ಗೆ ನೀಡಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಕೆಲಸ ಮಾಡುತ್ತಿದ್ದರು. ಕಾಲೇಜು ವಿರುದ್ಧವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನು ಸಚಿವರಿಗೆ ಕೊಡಲಾಗಿದೆ.ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು.ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ ಅಂರ ರಘುಪತಿ ಭಟ್ ಹೇಳಿದ್ದಾರೆ.