ಮೂಡುಬಿದಿರೆಯಲ್ಲಿ ಭಾವೈಕ್ಯತಾ ಜಾಥಾ
Friday, January 6, 2023
ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಹಕಾರದೊಂದಿಗೆ ಮೂಡುಬಿದಿರೆಯ ಬಸ್ ನಿಲ್ದಾಣದಲ್ಲಿ ಭಾವೈಕ್ಯತಾ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ಜರುಗಿತು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಭಿವೃದ್ಧಿ ಕಾಣದ ಚಟುವಟಿಕೆಗಲು ಹಾಗೂ ಭಾವನಾತ್ಮಕ ವಿಷಯಗಳೊಂದಿಗೆ ನಡೆಸುತ್ತಿರುವ ಚೆಲ್ಲಾಟವನ್ನು ಈ ಹಕ್ಕೊತ್ತಾಯ ಸಭೆಯಲ್ಲಿ ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಲಾಯಿತು.
ಮಂಗಳೂರು ಬಾವುಟಗುಡ್ಡೆಯಲ್ಲಿರುವ ರೈತ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿಯ ಬಳಿ ಉದ್ಘಾಟನೆಗೊಂಡು ಹೋರಾಟ ಭಾವೈಕ್ಯತಾ ಜಾಥವು ರಾಜ್ಯಾದ್ಯಂತ ಸಂಚರಿಸಲಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ್ಚ, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ. ಭಟ್, ಜಮಾತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಸಂಚಾಲಕ ಅಮೀನ್ ಅಹ್ರಕ್, ಏಐಕೆಎಂಎಂಎಸ್ ರಾಜ್ಯ ನಾಯಕ ಶಿವಪ್ರಕಾಶ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ ಶೆಟ್ಟಿ, ಬಿ.ಎಂ. ಭಟ್, ಆದಿತ್ಯ ನಾರಾಯಣ ಕೆಲ್ಲಾಜೆ, ಯೂತ್ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷ ತಫೀಲ್ ಅಹಮ್ಮದ್, ರಾಮಣ್ಣ ವಿಟ್ಲ, ರೈತ ಸಂಘದ ಸುರೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷ ಲಿಯೋ ವಾಲ್ಟರ್ ನಜರತ್, ಸಿಪಿಐಎಂನ ಜಿಲ್ಲಾ ನಾಯಕ ಕೆ. ಯಾಧವ ಶೆಟ್ಟಿ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.