ಮುಡಾರು : ಗೇರುಬೀಜ ಕಾರ್ಖಾನೆಯಲ್ಲಿ ಲಾರಿ ಚಾಲಕನ ಕೊಲೆ
Tuesday, January 31, 2023
ಕಾರ್ಕಳ: ಲಾರಿಯಿಲ್ಲಿ ಗೇರುಬೀಜ ತುಂಬಿಕೊಡು ಬಂದ ತಮಿಳುನಾಡು ಮೂಲದ ಲಾರಿ ಚಾಲಕನನ್ನು ಕೊಲೆಗೈದ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿನ ಕ್ಯಾಶ್ಯ ಫ್ಯಾಕ್ಟರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಲಾರಿ ಚಾಲಕ ಮಣಿ ತಮಿಳುನಾಡು (36) ಕೋಲೆಯಾದ ವ್ಯಕ್ತಿ.
ಮುಡ್ರಾಲುನಲ್ಲಿರುವ ಕ್ಯಾಶ್ಯ ಫ್ಯಾಕ್ಟರಿಗೆ ಪ್ರತಿ ವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅವರುಗಳೇ ಲಾರಿಯಿಂದ ಅನ್‌ಲೋಡ್ ಮಾಡಿ ಹೋಗುತ್ತಿದ್ದರು. ಅದರಂತೆ ಜ.30ರಂದು ಸಂಜೆ 4 ಗಂಟೆಗೆ ಗೇರುಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು ಅವರುಗಳು ಅನ್ ಲೋಡ್ ಮಾಡಿ ಹೋಗಿದ್ದು ಇನ್ನೆರಡು ಲಾರಿಗಳು ಸಂಜೆ 05:30 ಗಂಟೆಗೆ ಬಂದಿದ್ದು ತಡವಾದ್ದರಿಂದ ಲಾರಿಯು ಅನ್‌ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು.
ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಪೂಜಾರಿ ಎಂಬವರು ರಾತ್ರಿ 8:30ರ ವೇಳೆಗೆ ಕಟ್ಟಡದ ಮೇಲ್ಬದಿಯಲ್ಲಿ ಕೆಲಸ ಮಾಡುತ್ತಿದ್ದಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಬೊಬ್ಬೆ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಲಾರಿ ಬಳಿ ಬಂದು ನೋಡಿದಾಗ ಇನ್ನೋರ್ವ ಲಾರಿ ಚಾಲಕ ವೀರಬಾಹು ಎಂಬಾತ ಲಾರಿ ಚಾಲಕ ತಮಿಳುನಾಡಿನ ಮಣಿ ಎಂಬವನ ಕುತ್ತಿಗೆಗೆ ಶಾಲಿನಿಂದ ಬಿಗಿದು ಕುತ್ತಿಗೆ ಬಳಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ವೀರಬಾಹು ಮತ್ತು ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು ಜಗಳ ತಾರಕಕ್ಕೇರಿ ವೀರಬಾಹು, ಮಣಿಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ