
ತಾಯಿಯನ್ನು ವಿದೇಶಿ ಪ್ರವಾಸಕ್ಕೆ ಕರೆದೊಯ್ದ ಪುತ್ರ: ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ
Tuesday, January 31, 2023
ನವದೆಹಲಿ: ಪಾಲಕರನ್ನು ತಮ್ಮ ಜೊತೆ ವಿದೇಶಕ್ಕೆ ಕರೆದೊಯ್ಯಬೇಕೆಂಬುದು ಅನೇಕರ ಕನಸು. ಏಕೆಂದರೆ, ಬಹುತೇಕ ಪಾಲಕರು ಇಂತಹ ಅವಕಾಶವನ್ನು ಹೊಂದಿರುವುದೇ ಇಲ್ಲ. ಇಡೀ ಜೀವನದನ್ನು ಹಳ್ಳಿಯಲ್ಲೇ ಕಳೆಯುತ್ತಿರುತ್ತಾರೆ. ಆಸೆ ಇದ್ದರೂ ಕೂಡ ಅದನ್ನು ಈಡೇರಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಸೇರಿದಂತೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗುವುದಿಲ್ಲ.
ನನ್ನ ತಾಯಿ ತನ್ನ ಇಡೀ ಜೀವನವನ್ನು ಹಳ್ಳಿಯಲ್ಲಿ ಕಳೆಯುತ್ತಿದ್ದರು ಮತ್ತು ಹತ್ತಿರದಿಂದ ಎಂದಿಗೂ ವಿಮಾನವನ್ನು ನೋಡಿಲ್ಲ ಎಂದು ದತ್ತಾತ್ರೇಯ ಹೇಳಿದ್ದಾರೆ. ತಮ್ಮ ತಲೆಮಾರಿನ ಮೊದಲನೆಯವಳು ಮತ್ತು ಅವರ ಹಳ್ಳಿಯಿಂದ ವಿದೇಶಕ್ಕೆ ಪ್ರಯಾಣಿಸಿದ ಎರಡನೇ ಮಹಿಳೆ ಎಂದು ಹೆಗ್ಗಳಿಕೆಗೆ ದತ್ತಾತ್ರೇಯ ಅವರ ತಾಯಿ ಪಾತ್ರರಾಗಿದ್ದಾರೆ.
ಇದು ಸಂತೋಷಕರ ಅಲ್ಲವೇ? ಎಂದು ಲಿಂಕ್ಸ್‌ಇನ್‌ನಲ್ಲಿ ದತ್ತಾತ್ರೇಯ ಪೋಸ್ಟ್ ಹಂಚಿಕೊಂಡ ನಂತರ ಮೂರು ಲಕ್ಷಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸಿಸ್)