
Shocking News- ಮೊಬೈಲ್ ಬಳಕೆಗೆ ವಿರೋಧ- ಮಂಗಳೂರಿನಲ್ಲಿ 14 ವರ್ಷದ ಬಾಲಕ ಸುಸೈಡ್ !
Tuesday, January 31, 2023
ಮಂಗಳೂರು: 14 ವರ್ಷದ ಬಾಲಕನೊಬ್ಬ ಮನೆಯಲ್ಲಿ ಮೊಬೈಲ್ ಬಳಕೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಪದವು ಬಿ ಗ್ರಾಮದ ಕೋಟಿಮುರದ red bricks ಅಪಾರ್ಟ್ ಮೆಂಟ್ ನಲ್ಲಿರುವ ಜಗದೀಶ್ ಎಂಬವರ ಪುತ್ರ ಜ್ಞಾನೇಶ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಜ್ಞಾನೇಶ್ ನಗರದ ಕುಲಶೇಖರ ದ ಸೇಕ್ರೆಡ್ ಹಾರ್ಟ್ ಶಾಲೆ ಯಲ್ಲಿ ಒಂಬತ್ತ ನೇ ತರಗತಿಯಲ್ಲಿ ಕಲಿಯುತ್ತಿದ್ದನು.
ಈ ಘಟನೆ ಜನವರಿ 30 ರಂದು ರಾತ್ರಿ ನಡೆದಿದೆ.ಜಗದೀಶ್ ಹಾಗೂ ವಿನಯ ದಂಪತಿಗಳ ಪುತ್ರನಾಗಿರುವ ಜ್ಞಾನೇಶ್ ವಿಪರೀತವಾಗಿ ಮೊಬೈಲ್ ಬಳಕೆಯನ್ನು ಮಾಡುತ್ತಿದ್ದನು. ಈತ ವಿಪರೀತ ಮೊಬೈಲ್ ಬಳಕೆಯನ್ನು ಮಾಡುತ್ತಿರುವ ಬಗ್ಗೆ ಈತನ ತಾಯಿ ಗದರಿಸಿದ್ದರು. ಇದರಿಂದ ಬೇಸರಗೊಂಡ ಬಾಲಕ ಸ್ನಾನ ಮಾಡಿ ಬರುವುದಾಗಿ ರೂಮಿಗೆ ಹೋಗಿದ್ದಾನೆ. ರೂಮಿಗೆ ಹೋದವನು ಫ್ಯಾನಿಗೆ ನೇಣು ಹಾಕಿ ಸುಸೈಡ್ ಮಾಡಿಕೊಂಡಿದ್ದಾನೆ.
ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದ ಪುತ್ರ ತುಂಬಾ ಸಮಯ ಬಾರದಿದ್ದಾಗ ಬಾಲಕನ ತಂದೆ ಜಗದೀಶ್ ಅವರು ಬಾತ್ ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕನು ಸಾವನ್ನಪ್ಪಿರುವುದು ಕಂಡುಬಂದಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.