cinema ; ಆಸ್ಕರ್ ರೇಸ್ ನಲ್ಲಿ ಕಾಂತಾರ ಸಿನಿಮಾ.!
Tuesday, January 10, 2023
ತುಳುನಾಡಿನ ಕಥಾಹಂದರ ಇರುವ ʼಕಾಂತಾರʼ ಸಿನಿಮಾ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವಿಟರ್ ನಲ್ಲಿ ಮಾಹಿತಿಯನ್ನು ನೀಡಿದೆ.
ಕಾಂತಾರಕ್ಕೆ ಆಸ್ಕರ್ ಸಿಗಬೇಕೆಂದು ಹಲವು ಮಂದಿ ಆಗ್ರಹಿಸಿದ್ದರು. ಚಿತ್ರ ತಂಡ ಕೂಡ ಆಸ್ಕರ್ ಗಾಗಿ ಕಾಂತಾರವನ್ನು ಪರಿಗಣಿಸುವಂತೆ ಅರ್ಜಿ ಸಲ್ಲಿಸಿತ್ತು. ಸದ್ಯ ಅರ್ಜಿಯನ್ನು ಆಸ್ಕರ್ ಒಪ್ಪಿಕೊಂಡಿದ್ದು, ಆ ಮೂಲಕ ʼಕಾಂತಾರʼ ಸಿನಿಮಾ ಕೂಡ ಆಸ್ಕರ್ ರೇಸ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. ಕಾಂತಾರ’ ಚಿತ್ರಕ್ಕೆ ಎರಡು ಆಸ್ಕರ್ ಅರ್ಹತೆ ಸಿಕ್ಕಿದ್ದು, ಅತೀವ ಸಂತಸವಾಗುತ್ತಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಅಂತ ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಉತ್ತಮ ಚಿತ್ರ ಹಾಗೂ ಉತ್ತಮ ನಟ ವಿಭಾಗದಲ್ಲಿ 301 ಸಿನಿಮಾಗಳೊಂದಿಗೆ ʼಕಾಂತಾರʼ ಪ್ರಶಸ್ತಿಗೆ ಸೆಣಸಾಟ ನಡೆಸಲಿದೆ. ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜ. 24ರಂದು ಘೋಷಣೆಯಾಗಲಿದೆ.