
UDUPI ; ಶಿಕ್ಷಕರ ವರ್ಗಾವಣೆ ಮಾಡಬೇಡಿ ಪ್ಲೀಸ್ : ವಿದ್ಯಾರ್ಥಿಗಳ ಅಳಲು
ಶಿಕ್ಷಕರ ವರ್ಗಾವಣೆ ಖಂಡಿಸಿ ಊರವರು ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಶಾಲೆಯಲ್ಲಿ ನಡೆದಿದೆ.
ಶಿಕ್ಷಕರ ಸಹಕಾರದಿಂದ ಮನೆ ಮನೆಗೆ ತಿರುಗಿ ಬಹಳ ಪರಿಶ್ರಮದಿಂದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಶಾಲೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿದ ಶಾಲೆಯ ಮುಖ್ಯ ಶಿಕ್ಷಕ ಶೇಖರ ಪೂಜಾರಿ ಮತ್ತು ಇಂಗ್ಲೀಷ್ ಶಿಕ್ಷಕ ಶ್ರೀಕಾಂತ ಅವರ ವರ್ಗಾವಣೆಯನ್ನು ತಡೆ ಹಿಡಿದು ನಮ್ಮ ಶಾಲೆಯಲ್ಲಿ ಮುಂದುವರಿಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಶೈಕ್ಷಣಿಕ ವರ್ಷ ಪೂರ್ತಿ ಗೊಳ್ಳಲು ಮೊದಲು 3 ತಿಂಗಳುಗಳಷ್ಟೆ ಬಾಕಿ ಇದೆ ಪರೀಕ್ಷೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮುಖ್ಯ ಶಿಕ್ಷಕರು ಮತ್ತು ಇಂಗ್ಲೀಷ್ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಶಿಕ್ಷಕರ ವರ್ಗಾವಣೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪಪರಿಣಾಮ ಬೀಳುವುದರಿಂದ ಶಿಕ್ಷಕರ ವರ್ಗಾವಣೆಯನ್ನು ಕೈ ಬೀಡಬೇಡ ಅಂತ ವಿದ್ಯಾರ್ಥಿಗಳು ಹಾಗೂ ಊರವರು ಆಗ್ರಹಿಸಿದರು. ಕಳೆದ 5 ವರ್ಷಗಳ ಹಿಂದೆ 63 ಮಕ್ಕಳ ಸಂಖ್ಯೆಯನ್ನು ಹೊಂದಿರುವ ನಾವುಂದ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಸ್ತುತ 305 ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಸದ್ಯ ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಿಂದ ಬೇಸರಗೊಂಡ ಮಕ್ಕಳು ಶಾಲಾ ಮೈದಾನದಲ್ಲಿ ಪೋಷಕರ ಜೊತೆಗೆ ಪ್ರತಿಭಟನೆ ನಡೆಸಿದರು..