UDUPI : ನಕಲಿ ಅಯ್ಯಪ್ಪ ವೃತದಾರಿಗಳ ಹಣ ವಸೂಲಿ ದಂದೆ
Friday, December 9, 2022
ನಕಲಿ ಅಯ್ಯಪ್ಪ ವೃತದಾರಿಗಳು ಹಣ ವಸೂಲಿ ದಂದೆಗೆ ಇಳಿದು ಸಿಕ್ಕಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಅಯ್ಯಪ್ಪ ಸ್ವಾಮಿ ವೃತದಾರಿಗಳ ಸೋಗಿನಲ್ಲಿ ಉಡುಪಿಯ ಶಿಬಿರವಾದ ಅಯ್ಯಪ್ಪ ಭಕ್ತವೃಂದ ಆದಿಉಡುಪಿ ಬೈಪಾಸ್ ಉಡುಪಿ (ರಿ.) ಇದರ ಹೆಸರು ಹೇಳಿಕೊಂಡು ಶಿವಮೊಗ್ಗ ಮೂಲದ ನಾಲ್ಕು ಮಂದಿ, ಹಣ ವಸೂಲಿ ಮಾಡಿಕೊಂಡಿದ್ದರು.
ಆದಿಉಡುಪಿ ಬೈಪಾಸ್ ಶಿಬಿರ ನಾವು ಶಬರಿಮಲೆಗೆ ಹೊರಟಿದ್ದು ದೀಪರಾಧನೆ, ಅನ್ನದಾನಕ್ಕಾಗಿ ದೇಣಿಗೆ ನೀಡಿ ಎಂಬುದಾಗಿ ಹೇಳಿಕೊಂಡು ಅಕಾಡಕ್ಕಿಳಿದಿದ್ದರು. ಸುಮಾರು 2000 ರೂ ವರೆಗೆ ವಂತಿಗೆ ಮಾಡಿದ್ದರು, ನಂತರ ಲಕ್ಸ್ಮಿನಗರದ ದುರ್ಗಾಪರಮೇಶ್ವರಿ ಅಯ್ಯಪ್ಪ ಭಕ್ತವೃಂದದ ಬಳಿ ಇವರುಗಳು ಬಂದಿದ್ದು ಇಲ್ಲಿನ ಗುರುಸ್ವಾಮಿ ಮತ್ತು ಶಿಷ್ಯ ವೃಂದದವರು ಇವರನ್ನು ನಿಲ್ಲಿಸಿ ಇವರ ಶಿಬಿರದ ಬಗ್ಗೆ ಪ್ರಶ್ನಿಸಿರುತ್ತಾರೆ, ಇದಕ್ಕೆ ನಾಲ್ವರು ಸಮರ್ಪಕವಾಗಿ ಉತ್ತರಿಸದೆ ತಡವರಿಸಿದಾಗ ಆದಿಉಡುಪಿ ಬೈಪಾಸ್ ಶಿಬಿರದ ಸದಸ್ಯರುಗಳಾದ ಜಗದೀಶ್ ಕಾಂಚನ್. ಮಹೇಶ್ ಶೆಟ್ಟಿ. ಶಶಾಂಕ್.ಸುಜಿತ್ ಇವರುಗಳನ್ನು ಸಂಪರ್ಕಿಸಿ ನಿಮ್ಮ ಶಿಬಿರದ ಹೆಸರಿನಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದೆ ಇವರು ನಿಮ್ಮ ಶಿಬಿರದ ಸ್ವಾಮಿಗಳೇ ಎಂದು ಪ್ರಶ್ನಿಸಿದರು. ಈ ಬಾರಿ ಆದಿಉಡುಪಿ ಶಿಬಿರದವರು ದೇಣಿಗೆ ಸಂಗ್ರಹ ಮಾಡದೇ ಅನ್ನಸಂತರ್ಪಣೆ ಹಾಗೂ ಶಬರಿಮಲೆ ಯಾತ್ರೆಯನ್ನು ಮಾಡಲು ಸಂಕಲ್ಪ ಮಾಡಿರುವುದು ತಿಳಿದು ಬಂದಿದೆ. ತಕ್ಷಣ ಜಾಗ್ರತೊಂಡ ಲಕ್ಷ್ಮೀ ನಗರದ ಪರಿಸರದ ಸ್ವಾಮಿಗಳು ಈ ನಾಲ್ವರು ನಕಲಿ ಮಾಲಾಧಾರಿಗಳನ್ನು ಹಿಡಿದು ನಿಲ್ಲಿಸಿದ್ದಾರೆ.
ಆದಿಉಡುಪಿ ಶಿಬಿರದ ಪದಾಧಿಕಾರಿಗಳು ಹಾಗೂ ಸದಸ್ಯರು ಶೀಘ್ರವೇ ಸ್ಥಳಕ್ಕಾಗಮಿಸಿ ಈ ನಾಲ್ವರನ್ನು ತರಾಟೆಗೆ ತೆಗೆದುಕೊಂಡು, ದೇಣಿಗೆ ಮಾಡಿದ ಹಣವನ್ನು ಶ್ರೀದೇವರ ಹುಂಡಿಗೆ ಹಾಕಿಸಿ, ದೇವರ ಮುಂದೆ ಕ್ಷಮೆ ಯಾಚಿಸಿಸಲಾಯಿತು.