Cinema ; ಕಾಣಿಯೂರು ಶ್ರೀಗಳ ತೊಡೆ ಮೇಲೆ ಕುಳಿತು ಹಿರಣ್ಯಕಶ್ಯಪುವಿನ ಡೈಲಾಗ್ ಹೇಳಿದ ವಂಶಿಕಾ
Friday, December 9, 2022
ಕಲರ್ಸ್ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವಂಶಿಕ ಸದ್ಯ ಕಿರು ತೆರೆಯ ಬೇಡಿಕೆಯ ಕಲಾವಿದೆ.
ಕಿರುತೆರೆಯಲ್ಲಿ ಮೋಡಿ ಮಾಡಿದ ಮುದ್ದು ಮಗು ವಂಶಿಕ, ಉಡುಪಿಯ ಬಾಲಕೃಷ್ಣನ ಸನ್ನಿಧಿಯಲ್ಲಿ ಸಖತ್ ಡೈಲಾಗ್ ಹೇಳುವ ವಿಡಿಯೋ ವೈರಲ್ ಆಗಿದೆ.
ನರಸಿಂಹದೇವರ ಆರಾಧಕರಾಗಿರುವ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ, ತೊಡೆಯ ಮೇಲೆ ಪ್ರಹ್ಲಾದನಂತೆ ಕುಳಿತಿರುವ ಪುಟ್ಟ ಮಗು ವಂಶಿಕ, ಹಿರಣ್ಯಕಶ್ಯಪುವಿನ ಡೈಲಾಗ್ ಗಳನ್ನು ಹೇಳಿ ಅಚ್ಚರಿ ಹುಟ್ಟಿಸಿದ್ದಾಳೆ.
ಕೆಲ ವಾರದ ಹಿಂದೆ ಟಿವಿ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಒಂದರಲ್ಲಿ ವಂಶಿಕ ಹಿರಣ್ಯಕಶ್ಯಪು ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದಳು. ಕಲಾವಿದ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಸದ್ಯ ರಾಜ್ಯಾದ್ಯಂತ ತನ್ನ ಟ್ಯಾಲೆಂಟ್ ಮೂಲಕ ಮೋಡಿ ಮಾಡಿದ್ದಾಳೆ.