
UDUPI ; ಮದ್ಯ ಸೇವಿಸಿ ಶಾಲಾ ಜಗಲಿಯಲ್ಲಿ ಮಲಗಿದ ಶಿಕ್ಷಕ : ವಿಡಿಯೋ ವೈರಲ್
ಶಿಕ್ಷಕನೋರ್ವ ಕಂಠಪೂರ್ತಿ ಕುಡಿದು ಮೇಲೆ ಏಳುದಕ್ಕೆ ಆಗದೇ ಶಾಲಾ ಜಗಲಿಯಲ್ಲಿ ಮಲಗಿದ ಘಟನೆ ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಕಂಠಪೂರ್ತಿ ಕುಡಿದು ಜಗಲಿಯಲ್ಲಿ ಮಲಗಿದ ಶಿಕ್ಷಕ. ಗ್ರಾಮದ ಶಾಲೆಯ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಇಂತಹ ಕಾರ್ಯವನ್ನು ನಡೆಸಿದ್ದು, ಶಿಕ್ಷಕನನ್ನು ಕೂಡಲೇ ಅಮಾನಾತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದ್ದಾರೆ.