UDUPI : ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ
Saturday, November 5, 2022
ಕುಡಿದ ಮತ್ತಿನಲ್ಲಿ ಹೊರ ರಾಜ್ಯದ ಯುವತಿಯೊಬ್ಬಳು ಬೀದಿ ರಂಪಾಟ ಮಾಡಿದ ಘಟನೆ ಉಡುಪಿ ಮಣಿಪಾಲದ ಡಿಸಿ ಆಫೀಸ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಧ್ಯ ಸೇವನೆ ಮಾಡಿದ ಯುವತಿ, ಯುವಕನೊಂದಿಗೆ ಪಿಜ್ಜಾ ಶಾಫ್‌ಗೆ ಬಂದು ಗಲಾಟೆ ನಡೆಸಿದ್ದಳು.
ಈ ವೇಳೆ ಪಿಜ್ಜಾ ಶಾಪ್ ಸಿಬ್ಬಂದಿ ಇಬ್ಬರನ್ನು ಹೊರಗೆ ಕಳುಹಿಸಿದ್ದಾರೆ. ಹೊರ ಬಂದ ಯುವತಿ, ಪಿಜ್ಜಾ ಶಾಫ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಈ ವೇಳೆ ತಣ್ಣೀರು ತಲೆಗೆ ಹಾಕಿ ಯುವತಿಯ ನಶೆ ಇಳಿಸಲು ಮುಂದಾಗಿದ್ದಾರೆ.
ಈ ವೇಳೆ ಕೋಪಗೊಂಡ ಯುವತಿ ಸಾರ್ವಜನಿಕರಿಗೂ ಹಲ್ಲೆಗೆ ಮುಂದಾದ ಘಟನೆ ನಡೆಯಿತು. ಮಧ್ಯದ ಅಮಲಿನಲ್ಲಿ ನಿಲ್ಲಲಾಗದೇ ಯುವತಿ ಪದೇ ಪದೇ ರಸ್ತೆಯಲ್ಲಿ ಬೀಳುತ್ತಿದ್ದಳು. ಅಲ್ಲದೇ ಜೊತೆಗಿದ್ದ ಯುವಕನಿಗೂ ನಶೆರಾಣಿ ಚಪ್ಪಲಿ ಏಟು ನೀಡಿದ್ದಳು. ವಿಷಯ ತಿಳಿದು ಮಣಿಪಾಲ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು.