
ಮತ್ತೆ ಮಾಯಮೃಗ ಭಾಗ 5 - CSP ಹಾಜರ್- ನಾನು ಕೆಲಸಕ್ಕೆ ರಾಜೀನಾಮೆ ನೀಡುತ್ತೇನೆ....
Friday, November 4, 2022
ಸಿರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಟಿ ಎನ್ ಸೀತಾರಾಮ್ ಅವರ ಮತ್ತೆ ಮಾಯಾಮೃಗ ದ ಐದನೇ ಭಾಗದಲ್ಲಿ ಬಹಳ ಕಾತರದಿಂದ ಕಾಯುತ್ತಿದ್ದ CSP ( T N SEETHARAM) ಹಾಜರಾಗಿದ್ದಾರೆ.
ಲಕ್ಷ್ಮಿ ನರಸಿಂಹ ಶಾಸ್ತ್ರಿಗಳ ನಾಪತ್ತೆ ಪ್ರಕರಣ ಕಗ್ಗಂಟಾಗಿದ್ದು, ಕಲ್ಯಾಣಿಯಲ್ಲಿ ಅವರ ಹುಡುಕಾಟ ನಡೆಸಿದರೂ ದೇಹ ಪತ್ತೆ ಯಾಗಿಲ್ಲ.
ಕವನದ ಸಾಲುಗಳನ್ನು ಹೇಳುವ ಮೂಲಕ ಸಿಎಸ್ ಪಿ ಎಂಟ್ರಿ ಆಗಿದೆ. ಸಿ ಎಸ್ ಪಿ ಅವರ ಕಚೇರಿಗೆ ಮಾಳವಿಕ ಮಗಳ ಜೊತೆಗೆ ಬಂದು ಭೇಟಿ ಮಾಡಿದ್ದಾರೆ. ತನ್ನ ಗಂಡನಿಗೆ ತನ್ನ ಮೇಲೆ ಇರುವ ಸಿಟ್ಟನ್ನು ಮಾಳವಿಕ ಬಾವುಕವಾಗಿ ಮಾತನಾಡಿದ್ದಾಳೆ. ತಾನು ಹೇಳಿದ ಸಾಕ್ಷ್ಯದಿಂದ ತನ್ನ ಕುಟುಂಬ ಒಡೆದು ಹೋಯಿತು ಎಂಬುದನ್ನು ಮಾಳವಿಕ ಸಿಎಸ್ ಪಿ ಜೊತೆಗೆ ಚರ್ಚಿಸಿದ್ದಾಳೆ. ನಾನು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗಬಹುದು ಎಂಬುದನ್ನು ಮಾಳವಿಕ ಸಿಎಸ್ ಪಿ ಮುಂದೆ ಬಿಚ್ಚಿಟ್ಟಿದ್ದಾಳೆ
ಟೀಚರ್ ಮಗಳಿಗೆ ಅಮೇರಿಕಾದಿಂದ ಪತ್ರ ಬಂದಿರುವ ವಿಚಾರ ತಿಳಿಸಿದ್ದಾಳೆ. ಆ ಪತ್ರದಲ್ಲಿ ಏನಿದೆ ಎಂಬುದು ವೈದ್ಯ ಮಗಳು ಮನೆಗೆ ಬಂದೆ ಗೊತ್ತಾಗಬೇಕಾಗಿದೆ.
ಐದನೇ ಭಾಗದಲ್ಲಿ ನಾಪತ್ತೆಯಾಗಿರುವ ಶಾಸ್ತ್ರೀಗಳು ಪತ್ತೆಯಾಗದೆ ಕಗ್ಗಂಟಾಗಿದ್ದರೆ, ಸಿಎಸ್ ಪಿ ಎಂಟ್ರಿ ಮತ್ತು ಮಾಳವಿಕ ಜೊತೆಗೆ ಭೇಟಿಯಲ್ಲಿ ಹಲವು ಚರ್ಚೆಗಳಾಗಿದೆ. ಮಾಳವಿಕ ಕೆಲಸ ಬಿಡಬೇಕಾದ ಪರಿಸ್ಥಿತಿ ಏನು? ಟೀಚರ್ ಮಗಳಿಗೆ ಅಮೇರಿಕಾದಿಂದ ಬಂದ ಪತ್ರದಲ್ಲೇನಿದೆ? ಎಂಬುದು ಕುತೂಹಲ ಸೃಷ್ಟಿಸಿದೆ.