-->

ನ. 8ರಂದು ವರ್ಷದ ಕೊನೆಯ ಗ್ರಹಣ

ನ. 8ರಂದು ವರ್ಷದ ಕೊನೆಯ ಗ್ರಹಣ

ಮಂಗಳೂರು:- ಕಳೆದ ಅಕ್ಟೋಬರ್ 25ರ ಪಾಶ್ರ್ವ ಸೂರ್ಯ ಗ್ರಹಣದ ನಂತರ, ಇದೇ ನವೆಂಬರ್ 8ರ ಮಂಗಳವಾರ ಹುಣ್ಣಿಮೆಯಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. 


ಅಂದು ಗ್ರಹಣವು ಮಧ್ಯಾಹ್ನ 2.39ಕ್ಕೆ ಆರಂಭವಾಗಿ 4.29ಕ್ಕೆ ಗರಿಷ್ಠ ಪ್ರಮಾಣ ತಲುಪಲಿದೆ. ನಗರದಲ್ಲಿ ಅಂದು ಸಂಜೆ 6 ಗಂಟೆಗೆ ಪಾಶ್ರ್ವ ಗ್ರಹಣದೊಂದಿಗೆ ಚಂದ್ರೋದಯವಾಗಿ, 6.19ಕ್ಕೆ ಗ್ರಹಣ ಅಂತ್ಯವಾಗಲಿದೆ. ಈ ಸಮಯದಲ್ಲಿ ಚಂದ್ರ ದಿಗಂತದ ಅಂಚಿನಲ್ಲಿರುವ ಕಾರಣ ಗ್ರಹಣ ಕಾಣಸಿಗುವುದು ಕಷ್ಟವಾಗಿದೆ.


ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಆಕಾಶ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರು ಮತ್ತು ಶನಿ ಗ್ರಹಗಳನ್ನು ಹಾಗೂ ಹುಣ್ಣಿಮೆಯ ಚಂದ್ರನನ್ನು ದೂರದರ್ಶಕದ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.


 ಇದರೊಂದಿಗೆ ನಕ್ಷತ್ರಗಳು, ನಕ್ಷತ್ರ ಪುಂಜಗಳು ಮತ್ತು ಗ್ರಹಣಗಳನ್ನು ಪರಿಚಯಿಸಲಾಗುವುದು. ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99