UDUPI : ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಸಾವು
Friday, November 4, 2022
ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಯುವಕನೊಬ್ಬ ಗಂಭೀರ ಗಾಯಗೊಂಡು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ನಡೆದಿದೆ.
ಅರೆಹೊಳೆ ಕ್ರಾಸ್ ಸಿಲ್ವರ್ ಕಾಲನಿ ನಿವಾಸಿ ಗಿರೀಶ ಮೋಗವೀರ (27) ಸಾವನ್ಪಿದ ಯುವಕ. ಗಿರೀಶ ಮೊಗವೀರ, ರಾತ್ರಿ ನಾವುಂದದಿಂದ ಮನೆ ಕಡೆಗೆ ಹೋಗು ತ್ತಿದ್ದ ಸಂದರ್ಭ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರ ಗಾಯಗೊಂಡರು. ಕೂಡಲೇ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡುಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ಪಿದ್ದಾರೆ.