
UDUPI ; ಅನ್ನ ಉಂಡ ಮನೆಗೆ ಕನ್ನ ಹಾಕಿದ ಕಳ್ಳಿ ನರ್ಸ್ ಬಂಧನ
ವೃದ್ಧಯೊಬ್ಬರ ಆರೈಕೆಗೆಂದು ಬಂದ ಹೋಮ್ ನರ್ಸ್ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ. ಬಾಗಲಕೋಟೆಯ ಮೂಲದ ರೇಖಾ ಬಂಧಿತ ಕಳ್ಳಿ ನರ್ಸ್.
ಇಲ್ಲಿನ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರನ್ನು ನೋಡಿಕೊಳ್ಳಲು ಉಡುಪಿಯ ಉಷಾ ಖಾಸಗಿ ಏಜೆನ್ಸಿ ಮುಖಾಂತರ ರೇಖಾಳನ್ನು ನೇಮಿಸಿದ್ದರು.
ಅ.20 ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಂಡಿದ್ದು, ನ.21 ರಂದು ಸಂಜೆ ವೇಳೆ ರೇಖಾ ಹೆಬ್ಬಳ್ಳಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದಳು. ಬಳಿಕ ವಸಂತ ಶೆಟ್ಟಿ ಅವರು ಸರಸ್ವತಿ ಅವರ ಬಳಿ ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ 1,45,000 ರೂ. ಮೌಲ್ಯದ ಚಿನ್ನದ ಚೈನ್ ಕಳವಾಗಿತ್ತು. ಈ ಬಗ್ಗೆ ರೇಖಾಳಿಗೆ ಫೋನ್ ಮಾಡಿದ್ರೆ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಸಂಶಯದಿಂದ ರೇಖಾ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಕಳ್ಳಿ ರೇಖಾಳನ್ನು ಬಂಧಿಸಿದ್ದಾರೆ