UDUPI ; ಉಡುಪಿ ಕೃಷ್ಣ ಮಠ ಟಾರ್ಗೆಟ್ ಮಾಡಿದ್ನಾ ಬಾಂಬರ್ ಶಾರಿಕ್..
Sunday, November 27, 2022
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರಿಕ್, ಉಡುಪಿ ಬಂದಿದ್ನಾ, ಉಡುಪಿಯ ಶ್ರೀ ಕೃಷ್ಣ ಮಠ ಈತನ ಟಾರ್ಗೆಟ್ ಲೀಸ್ಟ್‌ನಲ್ಲಿ ಇತ್ತಾ ಎನ್ನುವ ಅನುಮಾನ ಮೂಡುತ್ತಿದೆ.
ಶಾರಿಕ್ ತನಿಕೆ ನಡೆಸುತ್ತಿರುವ ಮಂಗಳೂರು ಪೊಲೀಸರು ಇದೇ ವಿಚಾರವಾಗಿ ಉಡುಪಿಗೆ ಬಂದಿದ್ದು, ಉಡುಪಿಯ ಹಲವೆಡೆ ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಸುತ್ತಾಡಿದ ಬಗ್ಗೆ ಶಂಕೆಯಿದ್ದು, ರಥಬೀದಿಯಿಂದ ಮಾಡಿದ ಮೊಬೈಲ್ ಫೋನ್ ಕರೆಯಿಂದ ವಿಷಯ ಬಯಲಿಗೆ ಬಂದಿದೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರಿಕ್ ಕೈಯಿಂದ ಮೊಬೈಲ್ ಪಡೆದು ಕರೆ ಮಾಡಿದ್ದರು ಎನ್ನಲಾಗಿದೆ.
ಹೀಗಾಗಿ ಕೃಷ್ಣ ಮಠದ ಸಿಸಿ ಟಿವಿ ಪರಿಶೀಲನೆ ನಡೆಸಿದ್ದಾರೆ.
ದುರದೃಷ್ಟವಶಾತ್ ಅಂದ್ರೆ ಪೊಲೀಸರಿಗೆ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ. ಹೀಗಾಗಿ ಉಡುಪಿಯ ರಥ ಬೀದಿ ಆಸುಪಾಸಿನ ಸಿಸಿಟಿವಿ ಫೂಟೇಜ್‌ಗಳನ್ನು ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ..