
UDUPI : ಮರಳಲ್ಲಿ ಮೂಡಿದ ಕಾಂತಾರ ಪಂಜುರ್ಲಿ
ತುಳುನಾಡಿನ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಹೆಮ್ಮೆಯ ಸಿನಿಮಾ ಕಾಂತಾರ. ಕಾಂತಾರ ಚಲನಚಿತ್ರವು ತೆರೆಕಂಡು 50ನೇ ದಿನದತ್ತ ಸಾಗುತಿದ್ದರೂ ಕಾಂತಾರ ಹವಾ ಮಾತ್ರ ಕಡಿಮೆ ಆಗಿಲ್ಲ, ಕರ್ನಾಟಕ ಮಾತ್ರವಲ್ಲದೇ ದೇಶವೇ ಕಾಂತಾರ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತಾಡುತ್ತಿದೆ.
ಹೀಗಾಗಿ ಉಡುಪಿಯ ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಇವರು ಆಭರಣ ಜ್ಯುವೆಲೆರ್ಸ್ ನ ಸಹಯೋಗದೊಂದಿಗೆ ಕಾಪು ಕಡಲಕಿನಾರೆಯಲ್ಲಿ ಅದ್ಭುತವಾದ ಮರಳುಶಿಲ್ಪವನ್ನು ರಚಿಸಿದ್ದಾರೆ. ಮರಳಿನಲ್ಲಿ ಪಂಜುರ್ಲಿ ಮುಖವನ್ನು ರಚಿಸಿದ್ದು, ಇದರ ಪಕ್ಕ ಕಾಡವನ್ನು ಕೂಡ ನಿರ್ಮಿಸಿದ್ದಾರೆ. ಅಲ್ಲದೇ ಕಾಂತಾರ 50 ಅಂತ ಬರೆದು ಮುಂಚಿತವಾಗಿಯೇ ಕಾಂತಾರದ 50ನೇ ದಿನಕ್ಕೆ ಶುಭ ಕೋರಲಾಗಿದೆ. ಕಾಂತಾರದ ಪಂಜುರ್ಲಿ ಮುಖವನ್ನು ಮರಳು ಶಿಲ್ಪ ಕಾಲಕೃತಿಯನ್ನು ನೋಡಿದ ಜನ ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.