Cinema : ಮುಸ್ಲಿಂ ಯುವತಿಯ ವರಾಹ ರೂಪಂ ಹಾಡಿಗೆ ಭಾರೀ ಮೆಚ್ಚುಗೆ
Sunday, November 13, 2022
ಕಾಂತಾರ ಕಾಂತಾರ ಕಾಂತಾರ.. ಇತ್ತೀಚೆಗೆ ಈ ಸಿನಿಮಾದ್ದೇ ಮಾತು ಎಲ್ಲರ ಬಾಯಲ್ಲೂ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಿನಿಮಾದಷ್ಟೇ, ಸಿನಿಮಾದಲ್ಲಿ ಬರುವ ವರಾಹ ರೂಪಂ ಹಾಡನ್ನು ಮೆಚ್ಚಿಕೊಂಡಿದ್ದರು.
ಈ ಹಾಡು ಕಾಪಿ ರೈಟ್ ಅಂತ ವಿವಾದ ಕೂಡ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಹಳ ಮಂದಿ, ದೈವ ದೇವರಗಳ ವಿಡಿಯೋಗಳಿಗೆ ಈ ಹಾಡನ್ನು ಬಳಸಿ ರೀಲ್ಸ್ ಕೂಡ ಮಾಡಿದ್ದರು. ಸದ್ಯ ಈ ಹಾಡನ್ನು ಮುಸ್ಲಿಂ ಯುವತಿಯೊಬ್ಬಳು ಸುಶ್ರಾವ್ಯವಾಗಿ ಹಾಡಿ ಮೆಚ್ಚಗೆ ಪಡೆದಿದ್ದಾಳೆ.
ಕೇರಳ ಮೂಲದ ಮುಸ್ಲಿಂ ಯುವತಿ ಈ ಹಾಡನ್ನು ಹಾಡಿದ್ದಾಳೆ ಎನ್ನಲಾಗಿದ್ದು, ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಯುವತಿಯ ಹಾಡಿದ ವರಾಹ ರೂಪಂ ಹಾಡನ್ನು ನೂರಾರು ಮಂದಿ ಸ್ಟೇಟಸ್ ಹಾಕಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.