
BREAKING NEWS ಮಂಗಳೂರು- ಮಳಲಿ ಮಸೀದಿ ವಿವಾದ: ಮಸೀದಿ ಅರ್ಜಿ ವಜಾ!
Wednesday, November 9, 2022
ಮಂಗಳೂರಿನ ಗಂಜಿಮಠದಲ್ಲಿರುವ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದೆ.
ಗಂಜಿಮಠದ ಮಳಲಿಯಲ್ಲಿ ಮಸೀದಿ ನವೀಕರಣದ ವೇಳೆ ದೇಗುಲ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ಈ ಬಗ್ಗೆ ವಿಎಚ್ ಪಿ ಮಸೀದಿ ಸರ್ವೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಸೀದಿ ಆಡಳಿತ ಮಂಡಳಿ ಇದು ವಕ್ಪ್ ಟ್ರಿಬ್ಯುನಲ್ ವ್ಯಾಪ್ತಿಯಾಗಿದ್ದು, ವಕ್ಪ್ ಟ್ರಿಬ್ಯುನಲ್ ನಲ್ಲಿ ವಿಚಾರಣೆ ನಡೆಯಬೇಕೆಂದು ವಾದಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮುಂದಿನ ವಿಚಾರಣೆ 2023 ಜನವರಿ 8 ಕ್ಕೆ ನಡೆಯಲಿದೆ.