ಮತ್ತೆ ಮಾಯಮೃಗ ಭಾಗ 7-ನಿಮ್ಮ ಸಾವಿಗೋಸ್ಕರನೆ ಕಾಯ್ತಾ ಇದ್ದೇನೆ ಎಂದ ಮಗ....
Tuesday, November 8, 2022
ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಟಿ ಎನ್ ಸೀತಾರಾಮ್ ನಿರ್ದೇಶನದ ಮತ್ತೆ ಮಾಯಾಮೃಗ ಕುತೂಹಲ ಕೆರಳಿಸುತ್ತಿದೆ.
ಯು ಆರ್ ಅಂಡರ್ ಅರೆಸ್ಟ್ ಅಂತ ತನ್ನ ತಾಯಿಗೆ ಹೇಳುವ ಮೂಲಕ ತಾನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಾಸಂತಿ ದೃಶ್ಯ ಪರಿಚಯಿಸಿಕೊಂಡಿದ್ದಾಳೆ. ಸಂಗೀತಗಾರನ ಮಗಳು ತನ್ನ ಮನೆಯಲ್ಲಿ ಭಾವುಕಳಾಗಿದ್ದಾಳೆ. ಅಕ್ಕ ವೈಜಯಂತಿ ಮಾಡೆಲ್ ಆಗಿ ಚೆನ್ನೈ ಗೆ ಹೋಗಿದ್ದಾಳೆ ಅಂತ ತಿಳಿದುಕೊಂಡು ಪೋನ್ ನಲ್ಲಿ ಮಾತಾಡಿದ್ದಾಳೆ
ಮಲ್ಲಿಗೆ ಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಮಾಲತಿ ಗೆ ಅಮೇರಿಕಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಅವಕಾಶ ಸಿಕ್ಕಿರುವುದನ್ನು ವೈದ್ಯೆ ಗೆಳತಿಗೆ ಹೇಳುತ್ತಾಳೆ.ಗೆಳತಿಯು ತನ್ನ ಗೆಳತಿಗೆ ಅಮೇರಿಕದಲ್ಲಿ ಆದ ದುಬಾರಿ ಖರ್ಚಿನ ವಿಚಾರ ತಿಳಿಸಿದಾಗ ಅಮೇರಿಕ ಹೋಗುವ ಬಗ್ಗೆ ಮರುನಿರ್ಧಾರ ಮಾಡುವ ಬಗ್ಗೆ ತಿಳಿಸುತ್ತಾಳೆ.
ಅಮೇರಿಕಾದಿಂದ ಮಗ ಸೊಸೆ ಊರಿಗೆ ಬಂದದ್ದನ್ನು ಅನುಮಾನದಿಂದ ನೋಡಿದ ತಂದೆಗೆ ಅನುಮಾನ ನಿಜವಾಗಿದೆ. ಮಗ ತಂದೆಯಲ್ಲಿ, ಸೊಸೆ ಅತ್ತೆಯಲ್ಲಿ ಹಣದ ಅಗತ್ಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ ತಂದೆ ತಾಯಿ ಇವರ ಮಾತನ್ನು ನಂಬುವುದಿಲ್ಲ. ಹಿಂದೆ ಕೊಟ್ಟ ಹಣವನ್ನು ಕೊಡಲಿಲ್ಲ. ಈಗಲೂ ಕೊಡುವುದಿಲ್ಲ ಎಂದು ತಂದೆ ತಾಯಿ ಹೇಳಿದ್ದಕ್ಕೆ ಹೋಗುವಾಗ ಕೊಂಡೋಗ್ತೀರ ಎಂದು ಮಗ ಪ್ರಶ್ನಿಸಿದ್ದಾನೆ. ನಿಮ್ಮ ಸಾವಿಗೋಸ್ಕರನೆ ಕಾಯ್ತಾ ಇದ್ದೇನೆ ಎಂದಿದ್ದಾನೆ. ತಂದೆಯಿಂದ ಮಗನಿಗೆ ಅತ್ತೆಯಿಂದ ಸೊಸೆಗೆ ಕಪಾಳಕ್ಕೆ ಏಟು ಬಿದ್ದಿದೆ....
( ಭಾಗ 8 ಕ್ಕೆ ಮುಂದುವರಿಯುವುದು)