STATE

UDUPI : ಅಣ್ಣನ ಸಾವಿನಿಂದ ಮನನೊಂದು ತಂಗಿ ಆತ್ಮಹತ್ಯೆ

ಅಣ್ಣನ ಸಾವಿನಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಯಯ ಕಾರ್ಕಳ ತಾಲೂಕಿನ ಕಲ್ಯಾದ ಕೇಪುಲ ಎಂಬಲ್ಲಿ ನಡೆದಿದೆ. ನಿಶಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. 
ನಿಶಾ, ಮನೆ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಮುಲ್ಕಿ ಠಾಣೆ ವ್ಯಾಪ್ತಿಯಲ್ಲಿ ನಿಶಾ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದ. ಇದೇ ನೋವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಶಂಕಿಸಲಾಗಿದೆ. ನಿಶಾ, ನಿಟ್ಟೆಯ ಮೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಟ್ಯಾಗ್‌ಗಳು: STATE