GLAMOUR

ಅಫ್ಘಾನಿಸ್ತಾನ್ ಕ್ರಿಕೆಟಿಗನ ಜೊತೆ ಬಾಲಿವುಡ್ ನಟಿಯ ಮದುವೆ?: ಹರಿದಾಡುತ್ತಿದ್ದ ವದಂತಿಗೆ ನಟಿ ಅರ್ಷಿ ಖಾನ್ ನೇರ ಸ್ಪಷ್ಟನೆ! Will this Bollywood actress marry an Afghan cricketer? She gave her own answer.

 



"ಅವನಿಗೆ ಮದುವೆಯಾಗಿ 5 ಮಕ್ಕಳಿದ್ದಾರೆ!": ಕ್ರಿಕೆಟರ್ ಆಫ್ತಾಬ್ ಆಲಂ ಜೊತೆಗಿನ ನಂಟಿನ ರಹಸ್ಯ ಬಿಚ್ಚಿಟ್ಟ ಬಿಗ್‌ಬಾಸ್ ಸುಂದರಿ!

ವಿಶೇಷ ವರದಿ:

ಬಾಲಿವುಡ್ ನಟಿ ಹಾಗೂ 'ಬಿಗ್ ಬಾಸ್ 11' ಖ್ಯಾತಿಯ ಅರ್ಷಿ ಖಾನ್ (Arshi Khan) ಮತ್ತು ಅಫ್ಘಾನಿಸ್ತಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ ಆಫ್ತಾಬ್ ಆಲಂ (Aftab Alam) ನಡುವೆ ಪ್ರೇಮಾಂಕುರವಾಗಿದೆ ಹಾಗೂ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದವು. ಇದೀಗ ಈ ಸುದ್ದಿಗಳ ಕುರಿತು ಸ್ವತಃ ನಟಿ ಅರ್ಷಿ ಖಾನ್ ಅವರೇ ಬಾಯಿ ಬಿಟ್ಟಿದ್ದು, ಹರಿದಾಡುತ್ತಿರುವ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

"ಅವನು ನನ್ನ ಒಳ್ಳೆಯ ಗೆಳೆಯ, ಆದರೆ ಮದುವೆ ಸಾಧ್ಯವಿಲ್ಲ":

ಇತ್ತೀಚೆಗೆ 'ಬಾಲಿವುಡ್ ಬಬಲ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮತ್ತು ಕ್ರಿಕೆಟಿಗ ಆಫ್ತಾಬ್ ಆಲಂ ಸಂಬಂಧದ ಕುರಿತು ಮಾತನಾಡಿದ ಅರ್ಷಿ ಖಾನ್, "ನನಗೆ 2020 ರಿಂದ ಆಫ್ತಾಬ್ ಗೊತ್ತು. ನಾವಿಬ್ಬರೂ ಅತ್ಯಂತ ಆಪ್ತ ಗೆಳೆಯರು, ನಮ್ಮಿಬ್ಬರ ನಡುವೆ ಕಸಿನ್‌ಗಳಂತ (Cousins) ಸುಂದರವಾದ ಸ್ನೇಹವಿದೆ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ ಹಾಗೂ ಮದುವೆಯಾಗುವ ಪ್ರಶ್ನೆಯೇ ಬರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ 

ಇದಕ್ಕೆ ಕಾರಣ ವಿವರಿಸಿದ ನಟಿ, "ಆಫ್ತಾಬ್‌ಗೆ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಐದು ಜನ ಮಕ್ಕಳಿದ್ದಾರೆ! ಹೀಗಾಗಿ ನಮ್ಮಿಬ್ಬರ ಭವಿಷ್ಯ ಒಂದಾಗಲು ಸಾಧ್ಯವಿಲ್ಲ. ನಾನು ಯಾರನ್ನಾದರೂ ಪ್ರೀತಿಸಿದರೆ ನನಗೆ ಪೊಸೆಸಿವ್‌ನೆಸ್/ಹೊಟ್ಟೆಗೆಚ್ಚು ಬರುತ್ತದೆ, ಹಾಗಿರುವಾಗ ಮದುವೆಯಾದವರನ್ನು ನಾನು ಹೇಗೆ ಮದುವೆಯಾಗಲಿ?" ಎಂದು ತಮಾಷೆಯಾಗಿ ಕೇಳಿದ್ದಾರೆ.

ತಮ್ಮ ವಿವಾಹದ ಕುರಿತು ಉತ್ತರಿಸಿದ 36 ವರ್ಷದ ಅರ್ಷಿ ಖಾನ್, ತಾವು ಮದುವೆಯಾಗುವ ದಿನ ಬಂದಾಗ ಯಾವುದೇ ಆರ್ಭಟವಿಲ್ಲದೆ, ಅತ್ಯಂತ ಸರಳವಾಗಿ ಹಾಗೂ ರಹಸ್ಯವಾಗಿ ಮದುವೆಯಾಗುವುದಾಗಿ ತಿಳಿಸಿದ್ದಾರೆ.

ಯಾರೀ ಆಫ್ತಾಬ್ ಆಲಂ?:

33 ವರ್ಷದ ಅಫ್ಘಾನ್ ವೇಗದ ಬೌಲರ್ ಆಫ್ತಾಬ್ ಆಲಂ ಅವರು ತಮ್ಮ ರಾಷ್ಟ್ರೀಯ ತಂಡದ ಪರ 27 ಏಕದಿನ (ODI) ಹಾಗೂ 12 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 41 ಹಾಗೂ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಆಫ್ತಾಬ್, 2019 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.

ಇತ್ತ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅರ್ಷಿ ಖಾನ್ 'ತ್ರಾಹಿಮಾನ್' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಟ್ಯಾಗ್‌ಗಳು: GLAMOUR