UDUPI : ನಟ ಚೇತನ್ ವಿರುದ್ಧ ದೈವದ ಮೊರೆ ಹೋಗಲು ತೀರ್ಮಾನ
Thursday, October 20, 2022
ಒಂದು ಕಡೆ ಕಾಂತಾರ ಸಿನಿಮಾ ಯಶಸ್ಸಿನಲ್ಲಿ ಇದ್ರೆ ಇತ್ತ. ದೈವರಾಧನೆ ಅನ್ನೋದು ಹಿಂದೂ ಸಂಸ್ಕೃತಿಯ ಭಾಗವಲ್ಲ ಅಂತ ನಟ ಚೇತನ್ ಹೇಳಿಕೆಗೆ ಕರವಾಳಿಯಲ್ಲಿ ದೈವ ನರ್ತಕ ಸಮುದಾಯಗಳಿಂದ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಚೇತನ್ ವಿರುದ್ದ ತಾವು ನಂಬಿದ ದೈವಗಳ ಮೊರೆ ಹೋಗಲು ದೈವ ನರ್ತಕ ಸಮುದಾಯಗಳು ತೀರ್ಮಾನಿಸಿವೆ. ಚೇತನ್ ಅವರ ಹೇಳಿಕೆಯಿಂದ ನಮ್ಮ ಸಮುದಾಯದ ನಂಬಿಕೆಗೆ ದಕ್ಕೆ ಉಂಟಾಗಿದೆ.
ನಮ್ಮ ಸಮುದಾಯದ ಕುರಿತು ಚೇತನ್ ಅಧ್ಯಯನ ಮಾಡಿದ್ದಾರಾ, ಕೇವಲ ಪುಸ್ತಕ ಓದಿದರೆ ಸಮುದಾಯ ಏನು ಅಂತ ಗೋತ್ತಾಗುತ್ತಾ ಅಂತ ದೈವ ನರ್ತಕ ಕುಮಾರ ಪಂಬದ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಚೇತನ್ ವಿರುದ್ಧ ನಮ್ಮ ಸಮುದಾಯ ಒಂದು ಮಹತ್ವದ ತೀರ್ಮಾನಕ್ಕೆ ಬಂದಿದೆ. ನಾವು ಯಾವುದೇ ಪೊಲೀಸ್ ದೂರು ನೀಡುದಿಲ್ಲ,
ಮುಂದಿನ ದಿನಗಳಲ್ಲಿ ನಮ್ಮ ದೈವದ ಎದರು ನಿಂತು ಚೇತನ್ ಹೇಳಿಕೆಯಿಂದ ನಮಗೆ ನೋವಾಗಿದೆ. ದೈವವೇ ಎಲ್ಲವನ್ನು ನೋಡಿಕೊಳ್ಳಬೇಕು ಅಂತ ಪ್ರಾರ್ಥನೆ ಮಾಡುತ್ತೇವೆ. ದೈವವೇ ಆತನಿಗೆ ತಕ್ಕದಾದ ಬುದ್ದಿ ಕಲಿಸಲಿ ಅಂತ ಕುಮಾರ ಪಂಬದ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.