UDUPI : ನಟ ಚೇತನ್ ವಿರುದ್ಧ ದೂರು ದಾಖಲು
Thursday, October 20, 2022
ಭೂತ ಕೋಲ ಹಿಂದೂ ಸಂಸ್ಕೃತಿ ಭಾಗವಲ್ಲ ಅಂತ ನಟ ಚೇತನ್ ಹೇಳಿಕೆಗೆ ಉಡುಪಿ ಜಿಲ್ಲೆಯಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಹೀಗಾಗಿ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾರ್ಕಳದ ಹಿಂದೂ ಜಾಗರಣಾ ವೇದಿಕೆಯವರು ಚೇತನ್ ಹೇಳಿಕೆ ವಿರೋಧಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಚೇತನ್ ದೈವರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಎನ್ನುವ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ದಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಹಿಂದೂ ಜಾಗತಿಕ ವೇದಿಕೆ ಆಗ್ರಹಿಸಿದೆ.