
Cinema ; ಕಾಂತಾರ ಲೀಲಾಳ ವರ್ಕೌಟ್ ವಿಡಿಯೋ ವೈರಲ್
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ, ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲೇ ಭರ್ಜರಿ ಯಶಸ್ಸು ಕಾಣುತ್ತಿದೆ. ಕಾಂತಾರ ಸಿನಿಮಾದ ನಾಯಕಿ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡ, ನಟಿ ಸಪ್ತಮಿ ಗೌಡ ಅವರ ಬಗ್ಗೆಯೂ ಕೂಡ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ.
ನಟಿ ಸಪ್ತಮಿ ಗೌಡ ಅವರು, ನಟನೆ ಜೊತೆಗೆ ತಮ್ಮ ಪಿಟ್ ನೆಸ್ ಬಗ್ಗೆ ಕೂಡ ಗಮನ ಕೊಡುತ್ತಿದ್ದು. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಸದ್ಯ ಕಾಂತಾರ ಯಶಸ್ಸು ಕಾಣುತ್ತಿದ್ದಂತೆ ಸಪ್ತಮಿ ಗೌಡ ಅವರ ವರ್ಕೌಟ್ ವಿಡಿಯೋ ಸಖತ್ ವೈರಲ್ ಆಗಿದೆ.