UDUPI ; ಮರಳಿನಲ್ಲಿ ಮೂಡಿದ ಕಾಂತಾರ
Wednesday, October 19, 2022
ಕಾಂತಾರ ಸಿನೆಮಾ ಯಶಸ್ವಿಯಾಗಿ ಸಿನಿಪ್ರೀಯರ ಮನ ರಂಜಿಸುತ್ತಿದ್ದು, ನಟ ನಿರ್ದೇಶಕ ರಿಷಬ್ ಶೆಟ್ಟಿಗೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಲಾವಿದರ ತಂಡವೊಂದು ಇಲ್ಲಿನ ಕೋಡಿ ಕಡಲತೀರದ ಹಳೆಅಳಿವೆಯಲ್ಲಿ ಕಾಂತಾರ ನಿನೆಮಾದ ಕಲಾಕೃತಿ ರಚಿಸುವ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ರಕ್ಷಕ ಶಕ್ತಿಯನ್ನು ಸಾರಿದ ಪಂಜುರ್ಲಿ ಮತ್ತು ದೈವದ ರೂಪದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ ಸುಮಾರು 4 ಅಡಿ ಎತ್ತರದ ಕಲಾಕೃತಿಯನ್ನು ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಮತ್ತು ತಂಡ ರಚಿಸುವ ಮೂಲಕ ರಿಷಬ್ ಶೆಟ್ಟಿ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಲಾವಿದರು ರಚಿಸಿರುವ ಈ ಕಲಾಕೃತಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್. ಮತ್ತು ಸ್ಯಾಂಡ್ ಥೀಮ್ ಉಡುಪಿ ತಂಡ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡವರು.