-->

 12ನೇ ವರ್ಷದ ಆಳ್ವಾಸ್ ಪ್ರಗತಿಯಲ್ಲಿ 1,346 ಮಂದಿಗೆ ಉದ್ಯೋಗ-  3,118 ಜನರು ಮುಂದಿನ ಹಂತಕ್ಕೆ ಆಯ್ಕೆ | 222 ಕಂಪನಿಗಳು ಭಾಗಿ

12ನೇ ವರ್ಷದ ಆಳ್ವಾಸ್ ಪ್ರಗತಿಯಲ್ಲಿ 1,346 ಮಂದಿಗೆ ಉದ್ಯೋಗ- 3,118 ಜನರು ಮುಂದಿನ ಹಂತಕ್ಕೆ ಆಯ್ಕೆ | 222 ಕಂಪನಿಗಳು ಭಾಗಿ
ಮೂಡುಬಿದಿರೆ: 12ನೇ ವರ್ಷದ `ಆಳ್ವಾಸ್ ಪ್ರಗತಿ' ಬೃಹತ್ ಉದ್ಯೋಗ ಮೇಳ ಅಕ್ಟೋಬರ್ 14 ಹಾಗೂ 15 ರಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ, 1,346 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗಿದೆ. ಭಾಗವಹಿಸಿದ ಒಟ್ಟು 222 ಕಂಪನಿಗಳ ಪೈಕಿ 159 ಕಂಪನಿಗಳು, 3,118 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ 2,342 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು 8,160 ಅಭ್ಯರ್ಥಿಗಳು ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು.


ಬೆಂಗಳೂರು ಮೂಲದ ಜಾಗತಿಕ ಆನ್ಲೆöÊನ್ ವೃತ್ತಿಪರ ತರಬೇತುದಾರ ಕಂಪನಿ ಇಂಟೆಲಿಪಾತ್ ಸಾಫ್ಟ್ವೇರ್ ಸೊಲ್ಯುಶನ್ಸ್ ಪ್ರೆöÊ. ಲಿ. ಒಟ್ಟು 26 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಪ್ರತಿಯೊಬ್ಬರಿಗೂ ತಲಾ 9 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಅನ್ನು ಘೋಷಿಸಿದೆ. ಅದಲ್ಲದೇ, ಅಮೆಜಾನ್ ಕಂಪನಿ 18 ಅಭ್ಯರ್ಥಿಗಳಿಗೆ ರೂ. 3.2 ಲಕ್ಷ ವಾರ್ಷಿಕ ಪ್ಯಾಕೇಜ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ 31 ಅಭ್ಯರ್ಥಿಗಳನ್ನು ರೂ.2.5 ರಿಂದ 3.2 ಲಕ್ಷ ವಾರ್ಷಿಕ ಪ್ಯಾಕೇಜ್, ಟ್ರೇಡ್‌ಬುಲ್ ಕಂಪನಿ 32 ಅಭ್ಯರ್ಥಿಗಳನ್ನು ರೂ. 2.54 ರಿಂದ 3.8 ಲಕ್ಷ ವಾರ್ಷಿಕ ಪ್ಯಾಕೇಜ್ ನೊಂದಿಗೆ ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಂಡಿದೆ.ನೂರಾರು ಕಂಪನಿಗಳು ಒಂದೇ ಸೂರಿನಡಿ ಬಂದಿರುವುದು ವಿದ್ಯಾರ್ಥಿಗಳಾಗಿ ನಮಗೆ ಬಹಳ ಖುಷಿ ನೀಡಿದೆ. ಬಹಳಷ್ಟು ಅವಕಾಶಗಳು ಇಲ್ಲಿ ಸಿಕ್ಕಿದ್ದರಿಂದ ನಮ್ಮ ಆಸಕ್ತಿಗೆ ತಕ್ಕ ಕಂಪನಿಯಲ್ಲಿ ಸಂದರ್ಶನ ನೀಡಲು ಸಾಧ್ಯವಾಯಿತು. ನನಗೆ ಒಟ್ಟು ಮೂರು ಕಂಪನಿಗಳಲ್ಲಿ ಉದ್ಯೋಗ ಲಭಿಸಿದ್ದು, 9 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ನೀಡಿದ ಇಂಟೆಲಿಪಾತ್ ಕಂಪನಿಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ.

- ಭವ್ಯ ಎನ್., ಕೋಲಾರ


ಪದವಿ ಮುಗಿದ ತಕ್ಷಣ ಫ್ರೆಷರ್‌ಗಳಿಗೆ 9 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಸಿಗುತ್ತಿದೆ ಎಂದರೆ ನಂಬಲು ಆಗುತ್ತಿಲ್ಲ. ಆಳ್ವಾಸ್ ವಿದ್ಯಾರ್ಥಿಯಾಗಿದ್ದರಿಂದ ಬೇರೆ ಬೇರೆ ಕಂಪನಿಗಳಿಗೆ ಸಂದರ್ಶನ ನೀಡಲು ಬಹಳ ಧೈರ್ಯವೂ ಬಂತು. 

- ಅಂಜಲಿ ಕಡೇಲಿ, ಹುಕ್ಕೇರಿ, ಬೆಳಗಾವಿ (ಇಂಟೆಲಿಪಾತ್ ಕಂಪನಿಗೆ ಆಯ್ಕೆ)


ನಾನು ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿನಿ. ಉದ್ಯೋಗ ಹುಡುಕಾಡುವುದರಲ್ಲಿ ಇದು ನನ್ನ ಮೊದಲ ಪ್ರಯತ್ನ. ಆಳ್ವಾಸ್ ಪ್ರಗತಿಯಲ್ಲಿ ಐದಾರು ಕಂಪನಿಗಳಿಗೆ ಸಂದರ್ಶನ ನೀಡಿದ್ದೆ. ವೋಲ್ವೊ ಸಿಇ ಇಂಡಿಯಾ ಕಂಪನಿಗೆ ಆಯ್ಕೆ ಆಗಿರುವುದು ಬಹಳ ಸಂತಸ ತಂದಿದೆ. ಈ ಉದ್ಯೋಗ ಮೇಳವು ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಇದಕ್ಕಾಗಿ ನಾನು ಆಳ್ವಾಸ್‌ಗೆ ಆಭಾರಿಯಾಗಿದ್ದೇನೆ.

- ರೇಷ್ಮಾ ಕೆ., ಮಣಿಪಾಲ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99