Cinema ; ಕಾಂತಾರವನ್ನು ಕೊಂಡಾಡಿದ ನಟಿ ಕಂಗನಾ
Friday, October 21, 2022
ಕಾಂತಾರ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಮಾತನಾಡುತ್ತಿದ್ದಾರೆ. ಜೊತೆಗೆ ಇಡೀ ಭಾರತದ ಚಿತ್ರರಂಗದ ಕೂಡ ಕಾಂತಾರವನ್ನು ಕೊಂಡಾಡುತ್ತಿದ್ದು, ಇತ್ತೀಚಿಗೆ ಸಿನಿಮಾ ನೋಡಿದ ನಟಿ ಕಂಗನಾ ರಣಾವತ್ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ ನೋಡಿ, ಸಿನಿಮಾ ನೋಡಿ ಆಚೆ ಬಂದ ನಾನಿನ್ನೂ ಶೇಕ್ ಆಗುತ್ತಿದ್ದೇನೆ ಎಂದು ತೇವಗಣ್ಣಿನಿಂದ ವಿಡಿಯೋ ಮಾಡಿದ್ದಾರೆ.
ಕುಟುಂಬದೊಂದಿಗೆ ಕಾಂತಾರ ಸಿನೆಮಾ ನೋಡಿದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಭ್ ನಟನೆ ಇದೆಲ್ಲ ಮರೆಯಲು ಆಗುತ್ತಿಲ್ಲ. ಒಂದು ಅದ್ಭುತವಾದ ಸಿನಿಮಾ ನೋಡಿದ ತೃಪ್ತಿ ನನಗಿದೆ. ಈ ಸಿನಿಮಾದ ಅನುಭವದೊಂದಿಗೆ ಆಚೆ ಬರಲು ನನಗೆ ಕನಿಷ್ಟ ಒಂದು ವಾರವಾದರೂ ಬೇಕು ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ.