
UDUPI : ಬಾನಲ್ಲಿ ಸಾಲು ನಕ್ಷತ್ರಗಳ ಸಾಲು ಕಂಡು ಬೆಚ್ಚಿ ಬಿದ್ದ ಜನ ; ವಿಡಿಯೋ ವೈರಲ್
ನಿನ್ನೆ ರಾತ್ರಿ ವೇಳೆ ಆಕಾಶದಲ್ಲಿ ಸಾಲು ನಕ್ಷತ್ರಗಳನ್ನು ಕಂಡು
ಜನ ಬೆಚ್ಚಿಬಿದ್ದಿದ್ದು, ಸಾಲಾಗಿ ನಕ್ಷತ್ರಗಳು ಚಲಿಸುವ ವಿಡಿಯೋ ಬಾರೀ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಹಲವೆಡೆ ಚಲಿಸುವ ನಕ್ಷತ್ರಗಳು ಗೋಚರ ಆಗಿದ್ದು, ಜನ ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಅಲ್ಲದೇ ಎಲಿಯನ್ ಗಳು ಭೂಮಿಗೆ ಬಂದಿವೆ ಅಂತ ಜನ ಮಾತನಾಡಿಕೊಂಡಿದ್ದಾರೆ.
ವಾಸ್ತವದಲ್ಲಿ ಇವು ನಕ್ಷತ್ರಗಳಲ್ಲ, ಏಲಿಯನ್ ಗಳೂ ಅಲ್ಲ. ಹೆಚ್ಚಿನ ಇಂಟರ್ ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹರಿಯ ಬಿಟ್ಟ ಸ್ಯಾಟಿಲೈಟ್ ಗಳು. ಅಮೆರಿಕದಿಂದ ಹರಿಯ ಬಿಟ್ಟಿರುವ ಕೃತಕ ಉಪಗ್ರಹಗಳು.
ಹೆಚ್ಚಿನ ಇಂಟರ್ ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹಾರಿಸಿರುವ 53 ಕೃತಕ ಉಪಗ್ರಹಗಳು ಇದಾಗಿದ್ದು. ಶುಕ್ರವಾರವಷ್ಟೇ ಆಕಾಶಕ್ಕೆ ಸ್ಯಾಟಿಲೈಟ್ ಗಳನ್ನು ಹಾರಿಸಲಾಗಿತ್ತು ಸಾಲಾಗಿ ಸಾಗುವ ಸ್ಯಾಟಿಲೈಟ್ ಗಳನ್ನು ಕಂಡು ಅಚ್ಚರಿ ಪಟ್ಟಿದ್ದಾರೆ.
ವರ್ಷದ ಹಿಂದೆಯೂ ಉಡುಪಿ ಸೇರಿದಂತೆಹಲವಡೆ ಸ್ಯಾಟಲೈಟ್ ಗಳು ಗೋಚರಿಸಿತ್ತು ಆಕಾಶ ಸ್ವಚ್ಚವಾಗಿದ್ದರೆ ಇಂದು ಕೂಡ ಸ್ಯಾಟಲೈಟ್ ಗಳು ಕಾಣಿಸುವ ಸಾಧ್ಯತೆ ಹೆಚ್ಚು.