
UDUPI : ಅಂತರ್ ರಾಜ್ಯ ಸರಗಳ್ಳ ಅಂದರ್
ಅಂತರ್ ರಾಜ್ಯ ಸರಗಳ್ಳನನ್ನು ಉಡುಪಿ ಪೊಲೀಸರು ಸೆರೆ ಹಿಡಿದಿದ್ದಾರೆ. ದಾಂಡೇಲಿ ಮೂಲ್ ಮೌಲಾಲಿ ಜಮಾದಾರ್ ಬಂಧಿತ ಸರಗಳ್ಳ. ದಾಂಡೇಲಿ ಪಟೇಲ್ ನಗರ ನಿವಾಸಿ ಯಾಗಿದ್ದ ಮೌಲಾಲಿ ಜಮಾದಾರ್, ಅಕ್ಟೋಬರ್ 3 ಕಡಿಯಾಳಿ ಮಹಿಷಾಮರ್ದಿನಿ ದೇವಳಲ್ಲಿ ಚಂಡಿಕಾ ಹೋಮ ಮುಗಿಸಿ ತೆರಳುತ್ತಿದ್ದ ಪ್ರೇಮ ಶೆಣವಾ ಅವರ ಸರ ಎಗರಿಸಿದ್ದ. ಸಿಸಿ ಟಿವಿ ಮತ್ತು ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದರು.
ಕದ್ದ ಚಿನ್ನವನ್ನು ಧಾರವಾಡ ಟೋಲ್ ನಾಕಾ ಬಳಿಯ ಗೋಲ್ಡ್ ಶಾಪ್ ನಲ್ಲಿ ಸರ ಮಾರಿದ್ದ ಕಳ್ಳನನ್ನು ಬಂಧಿಸಿ, ಸುಮಾರು 3 ಲಕ್ಷ ಮೌಲ್ಯದ 63 ಗ್ರಾಂ ತೂಕದ ಚಿನ್ನ ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಮತ್ತು ಗೋವಾದ ಕೆಲವು ಪೊಲೀಸ್ ಠಾಣೆಯ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.