
UDUPI : ಯಕ್ಷಗಾನ ವೇಷ ಧರಿಸಿ ಸಂಭ್ರಮಿಸಿದ ಖ್ಯಾತ ನಟ ಯಾರು ಗುರುತಿಸಿ..?
ಯಕ್ಷಗಾನ ನೋಡಿದವರಿಗೆ, ಯಕ್ಷಗಾನ ವೇಷ ಧರಿಸಿ ಪೋಟೋ ತೆಗೆಸಿಕೊಳ್ಳಬೇಕು ಅಂತ ಅನ್ನಿಸುವುದು ಸಹಜ. ಅದರಂತೆ ಖ್ಯಾತ ಚಲನ ಚಿತ್ರ ನಟ ರಮೇಶ್ ಅರವಿಂದ್ ಅವರು ಕೂಡ, ಯಕ್ಷಗಾನ ವೇಷ ಧರಿಸಿ ಸಖತ್ ಆಗಿಯೇ ಪೋಟೋಗೆ ಪೋಸ್ ನೀಡಿ, ಸಂಭ್ರಮಿಸಿದ್ದಾರೆ.
ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ಉಡುಪಿಯ ಕೋಟದಲ್ಲಿ ಕಾರಂತ ಹುಟ್ಟೂರ ಪ್ರತಿಷ್ಠಾನ ಕೊಡಮಾಡವ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಕೋಟಕ್ಕೆ ಬಂದಿದ್ದ ರಮೇಶ್ ಅರವಿಂದ್ ಇಲ್ಲಿನ ಖಾಸಗಿ ಹೋಮ್ ಸ್ಟೇ ಭೇಟಿ ನೀಡಿದರು. ಈ ವೇಳೆ ಸ್ಥಳೀಯ ಯಕ್ಷಗಾನ ಕಲಾವಿದರ ಸಹಕಾರದಿಂದ ಯಕ್ಷಗಾನ ವೇಷ ಧರಿಸಿ, ಪೋಟೋಗೆ ಪೋಸ್ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೇ ಯಕ್ಷಗಾನದ ಹೆಜ್ಜೆಯನ್ನು ಕೇಳಿ ಕಲಿತು, ಕುಣಿದಿದ್ದಾರೆ. ಇದೇ ವೇಳೆ ನಟ ರಮೇಶ್ ಅರವಿಂದ್ ಯಕ್ಷಗಾನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.