
UDUPI : ನೋಡ ನೋಡುತ್ತಿದ್ದಂತೆ, ಹೈವೇಗೆ ಬಿದ್ದೇ ಬಿಡ್ತು ನೀರಿನ ಟ್ಯಾಂಕ್
ಉಡುಪಿಯ ಕೋಟೆಶ್ವರದಲ್ಲಿ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್‌ನ್ನು ಸುರಕ್ಷಿತ ಕ್ರಮ ತೆಗೆದುಕೊಂಡು ತೆರವುಗೊಳಿಸಲಾಗಿದೆ.
ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹೈವೆಗೆ ನೀರಿನ ಟ್ಯಾಂಕ್ ಬಿದ್ದು ಅವಘಡ ಸಂಭವಿಸಿದೆ ಅಂತ ವೈರಲ್ ಆಗುತ್ತಿದೆ. ಕಳೆದ 15 ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್‌ನ್ನು ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿ, ಕೋಟೇಶ್ವರ ಗ್ರಾಮ ಪಂಚಾಯತ್ ವಿವಿಧ ಇಲಾಖೆಗಳ ಸಹಕಾರದಲ್ಲಿ ತೆರವುಗೊಳಿಸಿತ್ತು.
ಈ ವೇಳೆ ಸುರಕ್ಷಿತ ಕ್ರಮ ಕೈಗೊಂಡು ಹೈವೇ ಕೂಡ ಕೆಲ ನಿಮಿಷಗಳ ಕಾಲ ಬಂದ್ ಮಾಡಲಾಗಿದ್ದು, ಹೀಗಾಗಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಸದ್ಯ ನೀರಿನ ಟ್ಯಾಂಕ್ ಮಗುಚಿ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನ ಇದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.