UDUPI : ಮೀನುಗಾರಿಕಾ ಬೋಟ್ ನಲ್ಲಿದ್ದ ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವು
Friday, October 7, 2022
ಮೀನುಗಾರಿಕಾ ಬೋಟ್ ನಲ್ಲಿದ್ದ ಕಾರ್ಮಿಕರೊಬ್ಬರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಹೆಜಮಾಡಿಯ ರಮೇಶ್ ಕೋಟ್ಯಾನ್ (75) ಮೃತ ಕಾರ್ಮಿಕ. ಗರುಡ ಪರ್ಸಿನ್ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ರಮೇಶ್ ಕೋಟ್ಯಾನ್, ಆಕಸ್ಮಿಕವಾಗಿ
ನೀರಿಗೆ ಬಿದ್ದು ಸಾವನ್ಪಿದ್ದಾರೆ. ಆಪದ್ಭಾಂಧವ ಮುಳುಗು ತಜ್ಞ ಈಶ್ವರ್ ಸ್ಥಳಕ್ಕೆ ಧಾವಿಸಿ ಶವವನ್ನು ಮೆಲಕ್ಕೆತ್ತಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.