-->
UDUPI : ಪರೇಶ್ ಮೆಸ್ತ ಕೊಲೆಯಲ್ಲ, ಆಕಸ್ಮಿಕ ಸಾವು ಸಿಬಿಐ ವರದಿ :  ಮುತಾಲಿಕ್‌ ಖಂಡಿನೆ

UDUPI : ಪರೇಶ್ ಮೆಸ್ತ ಕೊಲೆಯಲ್ಲ, ಆಕಸ್ಮಿಕ ಸಾವು ಸಿಬಿಐ ವರದಿ : ಮುತಾಲಿಕ್‌ ಖಂಡಿನೆ

ಪರೇಶ್ ಮೆಸ್ತ ಕೊಲೆಯಲ್ಲ ಆಕಸ್ಮಿಕ ಸಾವು ಅಂತ ಸಿಬಿಐ ವರದಿ ನೀಡಿದ್ದನ್ನು ಶ್ರೀರಾಮ ಸೇವಾಯ ಪ್ರಮೋದ್ ಮುತಾಲಿಕ್‌ ಖಂಡನೆ ವ್ಯಕ್ತಪಡಿಸಿದ್ದಾರೆ. 


 ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್‌, 2017ರಲ್ಲಿ ಪರೇಶ್ ಮೆಸ್ತ ಹತ್ಯೆ ಆಯಿತು ಇಡೀ ರಾಜ್ಯದ್ಯಂತ ಹಿಂದುಗಳ ಆಕ್ರೋಶ ಪ್ರತಿಭಟನೆ ಆಯಿತು. ಗೃಹ ಸಚಿವ ಅಮಿತ್ ಶಾ ಕೂಡ ಅವರ ಮನೆಗೆ ಭೇಟಿ ಕೊಟ್ಟರು..ಆ ಗಂಭೀರ ಪ್ರಕರಣವಾದಾಗ ಮುಖ್ಯಮಂತ್ರಿಯ ಸಿದ್ದರಾಮಯ್ಯ ಆಗಿದ್ರು‌ ಪ್ರಕರಣವನ್ನು 2019ರಲ್ಲಿ ಸಿಬಿಐಗೆ ಒಪ್ಪಿಸಲಾಯಿತು.




ಮೂರು ವರ್ಷದ ನಂತರ ಸಿ ಬಿ ಐ ಬಿ ರಿಪೋರ್ಟ್ ಹಾಕಿದೆ.ಸಹಜ ಸಾವು ಅನ್ನೋದು ತಪ್ಪು  ಈ ಪ್ರಕ್ರಿಯೆ ಅನ್ಯಾಯವಾಗಿದೆ ನಾನು ಇದನ್ನು ಧಿಕ್ಕರಿಸುತ್ತೇನೆ ವಿರೋಧಿಸುತ್ತೇನೆ. ಇದು ಅತ್ಯಂತ ಮೋಸ ಮಾಡಿದ ವರದಿ ಅಂತ ಹೇಳಿದ್ದಾರೆ.ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ. ಈಗಿನ ಕೇಂದ್ರ ಸರ್ಕಾರ ಕೇಸ್ ಅನ್ನು ರಿ ಓಪನ್ ಮಾಡಬೇಕು.ಸಂಪೂರ್ಣವಾಗಿ ತನಿಖೆ ಮಾಡಬೇಕು ರಾಜ್ಯದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ. ಇದು ಹಿಂದುತ್ವಕ್ಕೆ ಕುಟುಂಬ ಕ್ಕೆ ಅನ್ಯಾಯ ಮಾಡಿದ ವರದಿ. ತಪ್ಪಿತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು ಅಂತ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Ads on article

Advertise in articles 1

advertising articles 2

Advertise under the article