"ಚಡ್ಡಿಗಳೆ ಎಚ್ಚರ...., ದಕ್ಷಿಣ ಕನ್ನಡ ದ ರಸ್ತೆಯಲ್ಲಿ PFI ನಿಂದ ಎಚ್ಚರಿಕೆ ಬರಹ- ನಿಷೇಧಿತ ಸಂಘಟನೆ ವಿರುದ್ಧ ಕ್ರಮಕ್ಕೆ VHP ಆಗ್ರಹ
Tuesday, October 4, 2022
ನಿಷೇಧಿತ ಸಂಘಟನೆ PFI ರಸ್ತೆಯಲ್ಲಿ ಬರಹಗಳ ಮೂಲಕ ಎಚ್ಚರಿಕೆ ನೀಡಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಾ ಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ನಡೆದಿದೆ.
ಚಡ್ಡಿಗಳೇ ಎಚ್ಚರ PFI ನಾವು ಮರಳಿ ಬರುತ್ತೇವೆ ಎಂಬ ಎಚ್ಚರಿಕೆ ಬರಹಗಳನ್ನು ರಸ್ತೆಗಳಲ್ಲಿ ಬರೆಯಲಾಗಿದೆ. ಇದನ್ನು ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಕೋಮುಗಲಭೆಯ ಸೃಷ್ಟಿಸುವ ಕೃತ್ಯದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಬಂಟ್ವಾಳ ತಾಲೂಕಿನ ಪಿಲಾತಾ ಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಕೋಮು ಸಂಘರ್ಷಹುಟ್ಟುಹಾಕಲು ನಿಷೇಧಿತ ಭಯೋತ್ಪಾದಕ ಸಂಘಟನೆ PFI "ಚಡ್ಡಿಗಳೇ ಎಚ್ಚರ PFI ನಾವು ಮರಳಿ ಬರುತ್ತೇವೆ " ಎಂಬ ಬರಹಗಳನ್ನು ರಸ್ತೆಯಲ್ಲಿ ಬರೆದಿರುವುದು ಇದೊಂದು ಭಯೋತ್ಪಾದಕ ಕೃತ್ಯ ಎಂದು ವಿಹೆಚ್ ಪಿ ಹೇಳಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ PFI ಯಾವುದೇ ಚಟುವಟಿಕೆ ನಡೆದರೂ ಅದು ಭಯೋತ್ಪಾದಕ ಚಟುವಟಿಕೆಯ ಆಗಿದ್ದು ತಕ್ಷಣ ಪೊಲೀಸ್ ಇಲಾಖೆ ಕೃತ್ಯ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕೆಂದು ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಪತ್ರಿಕಾ ಪ್ರಕಟನೆಯ ಮೂಲಕ ಆಗ್ರಹಿಸಿದ್ದಾರೆ.