UDUPI : ಟಿಕೆಟ್ ರಹಿತ ರೈಲು ಪ್ರಯಾಣ : 5 ಮಂದಿಗೆ ಜೈಲು ಶಿಕ್ಷೆ
Friday, October 14, 2022
ಟಿಕೆಟ್ ಪಡೆಯದೇ ರೈಲು ಹತ್ತಿದ ಐವರು ಪ್ರಯಾಣಿಕರಿಗೆ ಜೈಲು ಶಿಕ್ಷೆ ವಿಧಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಜುನೈದ್ (24), ಸುಜಿತ್ (23), ವಿಷ್ಣು (25), ಯುನಿಸ್ (24) ಮತ್ತು ಮಿಸಾಬ್ (24) ಶಿಕ್ಷೆಗೆ ಒಳಗಾದವರು.
ಈ ಐದು ಮಂದಿ ಟಿಕೆಟ್ ಇಲ್ಲದೆ ಕೇರಳದಿಂದ ಗೋವಾಗೆ ಹೋಗುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿದ್ದು, ರೈಲು ಉಡುಪಿ ತಲುಪಿದಾಗ ಟಿಕೆಟ್ ಪರೀಕ್ಷಕರು ಟಿಕೆಟ್ ಕೇಳಿದಾಗ ಸಿಕ್ಕಿಬಿದ್ದಿದ್ದಾರೆ.
ಉಡುಪಿ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ತಲಾ ಒಂದು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 1000 ರೂ. ದಂಡ ವಿಧಿಸಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದರೆ ಜೈಲು ಶಿಕ್ಷೆಯನ್ನು ಎರಡು ತಿಂಗಳು ವಿಸ್ತರಿಸಲಾಗುವುದು ಅಂತ ನ್ಯಾಯಾಲಯ ತೀರ್ಪು ನೀಡಿದೆ.