ಮಗನಿಗೆ ಕಚ್ಚಿದ ಎರಡು ಹಾವಿಗಳೊಂದಿಗೆ ಆಸ್ಪತ್ರೆಗೆ ಬಂದ ತಂದೆ!
Sunday, October 9, 2022
ತಿರುವಳ್ಳೂರು: ತನ್ನ ಪುತ್ರನಿಗೆ ಕಚ್ಚಿದ 2 ಹಾವುಗಳೊಂದಿಗೆ ತಂದೆ ಆಸ್ಪತ್ರೆಗೆ ಹೋದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎರಡು ಹಾವುಗಳನ್ನು ಆಸ್ಪತ್ರೆಗೆ ತಂದ ವೇಳೆ ಆಸ್ಪತ್ರೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಕೂಡ ನಿರ್ಮಾಣವಾಗಿತ್ತು.
ತಿರುವಳ್ಳೂರ್ ಜಿಲ್ಲೆಯ ತಿರುತ್ತಣಿ ಪಕ್ಕದ ಕೊಲ್ಲ ಕುಪ್ಪಂ ಗ್ರಾಮದ ಎಲ್ಲಮ್ಮಾಳ್ ಮತ್ತು ಮಣಿ ದಂಪತಿಯ ಮಗ, ಏಳು ವರ್ಷದ ಮುರುಗನ್ ಎಂಬ ಬಾಲಕನಿಗೆ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ 2 ಹಾವುಗಳು ಕಚ್ಚಿದ್ದವು. ಇದನ್ನು ನೋಡಿದ ತಂದೆ ಮಣಿ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ, 2 ಹಾವುಗಳನ್ನೂ ಹೊಡೆದು ಎರಡೂ ಹಾವುಗಳೊಂದಿಗೆ ತನ್ನ ಮಗನನ್ನು ಚಿಕಿತ್ಸೆಗಾಗಿ ತಿರುತ್ತಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಅಸ್ವಸ್ಥ ಪುತ್ರನೊಂದಿಗೆ ಕೈಯಲ್ಲಿ ಹಾವುಗಳನ್ನು ಹಿಡಿದುಕೊಂಡೇ ತಿರುವಳ್ಳುವರ್ ಚೀಫ್ ಮೆಡಿಕಲ್ ಕಾಲೇಜು ಆಸ್ಪತ್ರೆಗೂ ತೆರಳಿದ್ದಾರೆ. ಸದ್ಯಕ್ಕೆ ಬಾಲಕನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.