ಪಿಲಿಕುಳಕ್ಕೆ ಹೊಸ ಪ್ರಾಣಿಪಕ್ಷಿಗಳ ಆಗಮನ- 15 ದಿನದಲ್ಲಿ ಸಿಗಲಿದೆ ದರ್ಶನ
Sunday, October 9, 2022
ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿ - ಪಕ್ಷಿಗಳ ಆಗಮನವಾಗಿದ್ದು , ಇನ್ನೂ ಹದಿನೈದು ದಿನಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ.
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬೆಂಗಳೂರಿನಲ್ಲಿರುವ People for Animals - Wildlife Rescue and Conservation Centre ನಿಂದ ಪ್ರಾಣಿ ಪಕ್ಷಿಗಳನ್ನು ತರಲಾಗಿದೆ.
ಪಿಲಿಕುಳ ಕ್ಕೆ ಬಂದಿರುವ ಪ್ರಾಣಿಪಕ್ಷಿಗಳು
ಕೊಂಬಿನ ಗೂಬೆ ( Indian Eagle Owl ) ,
ರಾಮ ಗಿಳಿ ( Alexandrine Parakeet ) ,
ಗುಲಾಬಿ ಉಂಗುರದ ಗಿಳಿ ( Rose - ringed Parakeet ) ,
ರೀಸಸ್ ಮಕಾಕ್
ಪಿಲಿಕುಳ ಕ್ಕೆ ಬಂದಿರುವ ಈ ಹೊಸ ಪ್ರಾಣಿ ಪಕ್ಷಿಗಳು 15 ದಿನಗಳ ತನಕ ಕ್ವಾರಂಟೈನ್ ನಲ್ಲಿ ಇರಲಿದೆ. ಅದರ ಬಳಿಕ ಇದನ್ನು ಪ್ರವಾಸಿಗರ ವೀಕ್ಷಣೆಗೆ ತೆರೆದಿಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ . ಜೆ . ಭಂಡಾರಿ ತಿಳಿಸಿದ್ದಾರೆ.