ದೋಣಿ ಮುಳುಗಡೆ- ಭೀಕರ ದುರಂತಕ್ಕೆ 76 ಮಂದಿ ಸಾವು
Monday, October 10, 2022
ನೈಜೀರಿಯಾ: 85 ಮಂದಿ ಪ್ರಯಾಣಿಸುತ್ತಿದ್ದ ದೋಣಿ
ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ 76 ಜನರು ಸಾವನ್ನಪ್ಪಿದ ಭೀಕರ ದುರಂತ ನೈಜೀರಿಯಾದಲ್ಲಿ ಶುಕ್ರವಾರ ಸಂಭವಿಸಿದೆ.
ಅನಾಂಬ್ರಾ ರಾಜ್ಯದಲ್ಲಿ ಈ ದೋಣಿ 85 ಜನರನ್ನು ಹೊತ್ತೊಯ್ಯುತ್ತಿತ್ತು. ದೋಣಿ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಮುಳುಗಿದ್ದು ಇದರಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿದೆ.
ದೋಣಿ ದುರಂತದ ಘಟನೆಗೆ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ದೋಣಿ ದುರಂತದಲ್ಲಿ ಉಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿಸಲಾಗಿದೆ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
President Buhari said he was saddened by the boat accident and directed that all possible efforts be made to account for all the passengers.
— Presidency Nigeria (@NGRPresident) October 9, 2022
“I pray for the repose of the souls of the deceased and for everyone’s safety, as well as the well-being of the family members of the victims of this tragic accident,” said the President.
— Presidency Nigeria (@NGRPresident) October 9, 2022
ದೋಣಿ ದುರಂತದಲ್ಲಿ ರಕ್ಷಿಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಜಲಮಾರ್ಗಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದಲ್ಲದೇ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು ಎಂದು ಅವರು ಸೂಚಿಸಿದ್ದಾರೆ.
ಈ ದುರಂತ ಅಪಾರ ಸಾವು ನೋವನ್ನುಂಟು ಮಾಡಿದೆ. ದೋಣಿ ಅಪಘಾತದಲ್ಲಿ ಉಳಿದವರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಎಂದು ಅಧ್ಯಕ್ಷರು ಕೋರಿದ್ದಾರೆ.