ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಕಾಲುಂಗುರ ಕದಿಯಲು 108ರ ವೃದ್ಧೆಯ ಪಾದವನ್ನೇ ಕತ್ತರಿಸಿದ ದರೋಡೆಕೋರರು






ಜೈಪುರ : ಕಾಲುಂಗುರ ಕದಿಯಲೆಂದು ಮಲಗಿದ್ದ 108 ವರ್ಷದ ವೃದ್ಧೆಯೊಬ್ಬರನ್ನು ದರೋಡೆಕೋರರು‌ ಮನೆಯಿಂದ ಹೊರಗೆಳೆದು ತಂದು ಆಕೆಯ ಪಾದವನ್ನೇ ಕತ್ತರಿಸಿದ ಪೈಶಾಚಿಕ ಕೃತ್ಯವೊಂದು ಜೈಪುರದಲ್ಲಿ ನಡೆದಿದೆ.

ಜಮುನಾ ದೇವಿ ಎಂಬ ಮಹಿಳೆಯನ್ನು ರವಿವಾರ ನಸುಕಿನ ವೇಳೆ ಮನೆಯಿಂದ ಹೊರಕ್ಕೆಳೆದು ತಂದು ಹರಿತವಾದ ಆಯುಧದಿಂದ ಪಾದ ಕತ್ತರಿಸಿ ಕಾಲುಂಗುರದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ಬೆಳಗೆದ್ದು ಹುಡುಕಾಡಿದಾಗ ಮನೆಯ ಹೊರಗೆ ನಿರ್ಮಿಸಲಾಗಿದ್ದ ಬಾತ್‌ರೂಂನಲ್ಲಿ ವೃದ್ಧೆ ಜಮುನಾದೇವಿ ರಕ್ತದ ಮಡುವಿನಲ್ಲಿ ವೃದ್ಧೆ ಬಿದ್ದಿದ್ದರು. 





ವೃದ್ಧೆ ತಾಯಿಯು ಮನೆಯ ಹೊರಗೆ ನೋವಿನಿಂದ ನರಳುತ್ತಿರುವುದು ಕೇಳಿಸಿತು ಎಂದು ಆಕೆಯ ಪುತ್ರಿ ಹೇಳಿದ್ದಾಳೆ. ಆ ವೇಳೆಗಾಗಲೇ ಭಾರಿ ರಕ್ತಸ್ರಾವ ಆಗಿತ್ತು. ತಕ್ಷಣ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ದಾಖಲಿಸಿದ್ದೇವೆ . ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿವರಿಸಿದ್ದಾರೆ. ಎಲ್ಲರೂ ನಿದ್ರಿಸುತ್ತಿದ್ದಾಗ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವಯಸ್ಸಿನ ಕಾರಣದಿಂದಾಗಿ ಅವರಿಗೆ ಜೋರಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಕುಟುಂಬ ಸದಸ್ಯರಿಗೂ ಅವರು ಮಾತನಾಡುವುದು ಕೇಳಿಸುವುದಿಲ್ಲ ಎಂದು ಅಳಿಯ ಗೋಪಾಲ್ ಮೀನಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW